ಬೆಂಗಳೂರಿನ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಕೆಎಲ್ ರಾಹುಲ್ - ಆಥಿಯಾ ಶೆಟ್ಟಿ ದಂಪತಿ
Monday, September 4, 2023
ಬೆಂಗಳೂರು: ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ದಂಪತಿ ಶನಿವಾರ ಬೆಂಗಳೂರಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.
ಪವಿತ್ರ ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಆಥಿಯಾ ಶೆಟ್ಟಿ ಹಾಗೂ ರಾಹುಲ್ ಬೆಂಗಳೂರಿನ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇವರು ಘಾಟಿ ಸುಬ್ರಮಣ್ಯಕ್ಕೆ ಆಗಮಿಸಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇದರಲ್ಲಿ ಅಥಿಯಾ ಮತ್ತು ರಾಹುಲ್ ಭಗವಂತನಿಗೆ ಹೂವು ಅರ್ಪಿಸಿ ನಮನ ಸಲ್ಲಿಸುತ್ತಿರುವುದನ್ನು ಕಾಣಬಹುದು.
ಅಥಿಯಾ ಸಲ್ವಾರ್ ಸೂಟ್ ಧರಿಸಿದ್ದರೆ, ರಾಹುಲ್ ಕ್ಯಾಶುಯಲ್ ಬಿಳಿ ಟಿ-ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದಾರೆ. ದಂಪತಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.