-->
1000938341
ಭಾವೀಪತ್ನಿಗೆ ಭಗವದ್ಗೀತೆ ಪುಸ್ತಕಗಳಿಂದ ತುಲಾಭಾರ : ನಿಶ್ಚಿತಾರ್ಥಕ್ಕೆ ಆಗಮಿಸಿದ ಅತಿಥಿಗಳಿಗೆ ಭಗವದ್ಗೀತೆ ಉಡುಗೊರೆ ನೀಡಿದ ವರ

ಭಾವೀಪತ್ನಿಗೆ ಭಗವದ್ಗೀತೆ ಪುಸ್ತಕಗಳಿಂದ ತುಲಾಭಾರ : ನಿಶ್ಚಿತಾರ್ಥಕ್ಕೆ ಆಗಮಿಸಿದ ಅತಿಥಿಗಳಿಗೆ ಭಗವದ್ಗೀತೆ ಉಡುಗೊರೆ ನೀಡಿದ ವರ

ತೆಲಂಗಾಣ: ಮದುವೆ ಎಂದರೆ ಎರಡು ಮನಸ್ಸು, ಎರಡು ದೇಹ, ಎರಡು ಕುಟುಂಬಗಳು ಸೇರುವ ಅನನ್ಯ ಬಂಧ‌‌. ಈ ಮದುವೆಯು ಬಂಧು-ಬಳಗ, ಇಷ್ಟಮಿತ್ರರ ಸಮ್ಮುಖದಲ್ಲಿ ನಡೆಯುವ ಸಂಭ್ರಮದ ಕಾರ್ಯಕ್ರಮ. ಮದುವೆಗೆ ಬಂದವರು ವಧು-ವರರಿಗೆ ಉಡುಗೊರೆ ನೀಡುವುದು ಸಹಜ. ಆದರೆ ಇಲ್ಲೊಬ್ಬ ವರ ತನ್ನ ನಿಶ್ಚಿತಾರ್ಥಕ್ಕೆ ಬಂದಿದ್ದ ಸಂಬಂಧಿಕರಿಗೆ ಭಗವದ್ಗೀತೆ ಪುಸ್ತಕವನ್ನೇ ಉಡುಗೊರೆ ನೀಡುವ ಮೂಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಕೊಂಡಾಪುರದ ಯಾಪ ಗ್ರಾಮದ ನಿವಾಸಿ ಪ್ರಶಾಂತ್ ವರ್ಮಾಗೆ ಸೆ.8ರಂದು ನಿಶ್ಚಿತಾರ್ಥ ತೇಜಸ್ವಿನಿ ಎಂಬ ಯುವತಿಯೊಂದಿಗೆ ನಡೆದಿದೆ. ಈ ನಿಶ್ಚಿತಾರ್ಥದಲ್ಲಿ ವಧು-ವರರ ಕುಟುಂಬ ಸೇರಿ ಅಪಾರ ಸಂಖ್ಯೆಯ ಬಂಧು ಮಿತ್ರರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು. ಬಂಧು ಮಿತ್ರರಿಗೆ ವರ ಪ್ರಶಾಂತ್ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಪ್ರಶಾಂತ್ ಅವರು ನೀಡಿದ ಉಡುಗೊರೆ ಭಗವದ್ಗೀತೆ ಹಿಂದೂಗಳ ಪವಿತ್ರ ಗ್ರಂಥ.

ಪ್ರಶಾಂತ್ ಆ ಉಡುಗೊರೆಯನ್ನು ಹೀಗೆ ಕೊಡದೆ, ತನ್ನ ಭಾವಿಪತ್ನಿಯ ತೂಕಕ್ಕೆ ಸಮನಾದ ಭಗವದ್ಗೀತೆಯ ಪುಸ್ತಕಗಳನ್ನು ತೂಗಿ ಅತಿಥಿಗಳಿಗೆಲ್ಲ ಹಂಚಿದ್ದಾರೆ. ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿ ತಮ್ಮ ಮದುವೆಗೆ ಕುಟುಂಬ ಸಮೇತ ಹಾಜರಾಗುವಂತೆ ಮದುವೆ ಪತ್ರಿಕೆ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. 

ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ರಾಜಾಜಿನಗರದಲ್ಲಿ ಸೀನಿಯರ್ ರಿಸರ್ಚ್ ಫೆಲೋ ಆಗಿ ಕೆಲಸ ಮಾಡುತ್ತಿರುವ ಪ್ರಶಾಂತ್, ಕೃಷಿಯಲ್ಲಿ ಪದವಿ ಮುಗಿಸಿರುವ ತೇಜಸ್ವಿನಿ ಅವರನ್ನು ಮದುವೆಯಾಗಲಿದ್ದಾರೆ. ಇಬ್ಬರೂ ತಮ್ಮ ನಿಶ್ಚಿತಾರ್ಥ ಸಮಾರಂಭದಲ್ಲಿ ತಮ್ಮ ಸ್ನೇಹಿತರು ಮತ್ತು ಅತಿಥಿಗಳಿಗೆ ಭಗವದ್ಗೀತೆಯನ್ನು ಉಡುಗೊರೆಯಾಗಿ ನೀಡಿದರು.

ಭಗವದ್ಗೀತೆಯನ್ನು ಏಕೆ ಉಡುಗೊರೆಯಾಗಿ ನೀಡಬೇಕೆಂದು ವರನು ಪ್ರಶಾಂತ್ ಅವರನ್ನು ಕೇಳಿದಾಗ, ಅವರು ತಮ್ಮ ಮದುವೆಗೆ ಬಂದ ಎಲ್ಲಾ ಅತಿಥಿಗಳಿಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡುವ ಒಂದು ಸಣ್ಣ ಪ್ರಯತ್ನ ಎಂದು ಹೇಳಿದರು. ಹೀಗಾಗಿಯೇ ಅತಿಥಿಗಳಿಗೆ ಭಗವದ್ಗೀತೆ ನೀಡಲು ನಿರ್ಧರಿಸಿದ್ದು, ಇನ್ನೂ ಹತ್ತು ಮಂದಿಗೆ ಗೀತಾ ಜ್ಞಾನ ನೀಡುವ ಅವಕಾಶ ಸಿಗಲಿದೆ ಎಂದು ಪ್ರಶಾಂತ್ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article