ಜ್ವರ ಇದ್ದಾಗ ರವೆ ಗಂಜಿ, ಹಣ್ಣಿನ ರಸದಂತಹ ಲಿಕ್ವಿಡ್ ಆಹಾರಗಳನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಕೆಲವರು ಮೋಸಂಬಿ ರಸವನ್ನು ಸಹ ಸೇವಿಸುತ್ತಾರೆ.
ಮೋಸಂಬಿ ಹಣ್ಣಿನಲ್ಲಿ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಕಂಡುಬರುತ್ತವೆ. ಇದು ದೇಹವನ್ನು ವೈರಲ್ ರೋಗಗಳ ವಿರುದ್ಧ ಹೋರಾಡಲು ಸಧೃಢಗೊಳಿಸುತ್ತದೆ.
ಇದಲ್ಲದೆ, ಮೋಸಂಬಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ವಿಟಮಿನ್ ಬಿ 6, ಥಯಾಮಿನ್, ಕಬ್ಬಿಣ, ಫೈಬರ್, ಸತು, ಪೊಟ್ಯಾಸಿಯಮ್, ತಾಮ್ರ, ಫೋಲೇಟ್‌ನಂತಹ ಪೋಷಕಾಂಶಗಳು ಹೇರಳವಾಗಿರುವುದರಿಂದ ಜ್ವರ ಇದ್ದಾಗ ಮೋಸಂಬಿ ಜ್ಯೂಸ್ ಸೇವನೆಯಿಂದ ಬೇಗ ಚೇತರಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.