-->
ಶ್ವಾನ ಕಚ್ಚಿರುವುದನ್ನು ಪೋಷಕರಿಗೆ ತಿಳಿಸದ ಬಾಲಕ: ರೇಬೀಸ್ ರೋಗದಿಂದ ಸಾವು

ಶ್ವಾನ ಕಚ್ಚಿರುವುದನ್ನು ಪೋಷಕರಿಗೆ ತಿಳಿಸದ ಬಾಲಕ: ರೇಬೀಸ್ ರೋಗದಿಂದ ಸಾವು

ಉತ್ತರಪ್ರದೇಶ: ಕಳೆದ ಒಂದು ತಿಂಗಳ ಹಿಂದೆ ಶ್ವಾನ ಕಡಿತಕ್ಕೊಳಗಾದ 14 ವರ್ಷದ ಬಾಲಕನೊಬ್ಬ ರೇಬೀಸ್​​ ಕಾಯಿಲೆಯಿಂದ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ವರದಿಯಾಗಿದೆ.

ಸಬೇಜ್ ಮೃತಪಟ್ಟ ಬಾಲಕ. ಸಬೆಜ್​ ಮನೆಯ ಹತ್ತಿರದಲ್ಲಿಯೇ ವಾಸವಿದ್ದ ಮಹಿಳೆಯೊಬ್ಬರು ಬೀದಿನಾಯಿಗಳಿಗೆ ದಿನನಿತ್ಯ ಆಹಾರ ನೀಡುತ್ತಿದ್ದರು. ಈ ಕಾರಣದಿಂದ ರಸ್ತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ 5-6 ನಾಯಿಗಳ ಪೈಕಿ ಒಂದು ಶ್ವಾನ ಬಾಲಕನಿಗೆ ಕಚ್ಚಿದೆ. ಈ ಹಿಂದೆಯೂ ನಾಯಿಗಳು ಹಲವರ ಮೇಲೆ ದಾಳಿ ನಡೆಸಿವೆ ಎನ್ನಲಾಗಿದೆ.

ನಾಯಿ ಕಡಿತಕ್ಕೆ ತುತ್ತಾದ ಸಬೇಜ್, ಈ ವಿಚಾರವನ್ನು ತನ್ನ ಪೋಷಕರಿಗೆ ತಿಳಿಸಲಿಲ್ಲ. ಘಟನೆ ನಡೆದು ನಾಲ್ಕು ದಿನಗಳ ನಂತರ ರೇಬೀಸ್ ರೋಗಲಕ್ಷಣಗಳು ಬಾಲಕನಲ್ಲಿ ಕಾಣಿಸಿಕೊಳ್ಳಲು ಪ್ರಾರಂಬಿಸಿದೆ ಎಂದು ಬಾಲಕನ ಅಜ್ಜ ಮತ್ಲುಬ್ ಅಹ್ಮದ್ ಹೇಳಿದ್ದಾರೆ. ಕುಟುಂಬದವರು ನೀಡಿದ ಮಾಹಿತಿ ಪ್ರಕಾರ, ಸಬೇಜ್ ವಿಪರೀತ ಭಯದಿಂದ ಬದುಕಲು ಮತ್ತು ಕತ್ತಲೆಯಲ್ಲಿ ವಾಸಿಸಲು ಪ್ರಾರಂಭಿಸಿದ್ದ. ಹೆದರಿ ಜೋರಾಗಿ ಗಲಾಟೆ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ತಕ್ಷಣ ಕುಟುಂಬಸ್ಥರು ಬಾಲಕನನ್ನು ಗಾಜಿಯಾಬಾದ್, ಮೀರತ್ ಮತ್ತು ದೆಹಲಿಯ ಏಮ್ಸ್‌ನ ಹಲವಾರು ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಬೇಜ್​ ಮೃತಪಟ್ಟಿದ್ದಾನೆ. ಬಾಲಕನ ಕುಟುಂಬವು ಘಟನೆಯ ಬಗ್ಗೆ ಕ್ರಮಕ್ಕೆ ಒತ್ತಾಯಿಸಿದ್ದು, ಇಂತಹ ಘಟನೆಗಳು ನಡೆಯದಂತೆ ಆಡಳಿತ ಮತ್ತು ಅಧಿಕಾರಿಗಳು ಖಚಿತಪಡಿಸಿಕೊಳ್ಳುವಂತೆ ಹೇಳಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article