ಬೆಳ್ತಂಗಡಿ: ಸೈಡ್ ಕೊಡುವ ವಿಚಾರದಲ್ಲಿ ಬೈಕ್ ಸವಾರನಿಗೆ ಕಾರು ಸವಾರರಿಂದ ಹಲ್ಲೆ - ರೊಚ್ಚಿಗೆದ್ದ ಸಾರ್ವಜನಿಕರಿಂದ ಕಾರು ಸವಾರರಿಗೆ ಹಿಗ್ಗಾಮುಗ್ಗ ಥಳಿತ



ಬೆಳ್ತಂಗಡಿ: ರಸ್ತೆಯಲ್ಲಿ ಹೋಗುವಾಗ ಸೈಡ್ ಕೊಡುವ ವಿಚಾರದಲ್ಲಿ ಕಾರು-ಬೈಕ್ ಅಪಘಾತವಾಗಿ ಮಾರಾಮಾರಿ ನಡೆದ ಘಟನೆ‌ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಸ್ ನಿಲ್ದಾಣ ಬಳಿ ನಡೆದಿದೆ‌.

ಬೈಕ್-ಕಾರು ಡಿಕ್ಕಿಯಾಗಿದೆ‌‌. ಆದ್ದರಿಂದ ಕಾರಿನಲ್ಲಿದ್ದ ಮೂವರು ಯುವಕರು ಬೈಕ್ ಸವಾರನ ಮೇಲೆ ಯದ್ವಾತದ್ವಾ ಹಲ್ಲೆ ಮಾಡಿದ್ದಾರೆ. ಹೆಲ್ಮೆಟ್ ನಿಂದ ಬೈಕ್ ಸವಾರನ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ‌. ಇದನ್ನು ತಡೆಯಲು ಯತ್ನಿಸಿದ ಸಾರ್ವಜನಿಕರ ಮೇಲೂ ಯುವಕರಿಂದ ಹಲ್ಲೆ ನಡೆದಿದೆ‌. ಆಗ ರೊಚ್ಚಿಗೆದ್ದ ಸಾರ್ವಜನಿಕರು ಮೂವರು ಯುವಕರಿಗೆ ಥಳಿಸಿದ್ದಾರೆ‌.


ಮಂಗಳೂರಿನಿಂದ ಸಕಲೇಶಪುರ ತೆರಳುತ್ತಿದ್ದ ಮೂವರು ಯುವಕರು ಶ್ಯಾಮ್ ಪ್ರಸಾದ್, ಅಕ್ಷಯ್ , ಸುದೀಪ್ ರಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ‌. ಪಶ್ಚಿಮ ಬಂಗಾಳ ಮೂಲದ ರಹಿಮುದ್ದಿನ್ ಹಲ್ಲೆಗೊಳಗಾದ ಬೈಕ್ ಸವಾರ. ಪರಿಸ್ಥಿತಿಯನ್ನು ನಿಯಂತ್ರಿಸಿ ನಾಲ್ವರನ್ನೂ ಬೆಳ್ತಂಗಡಿ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ರಹಿಮುದ್ದೀನ್ ಉಜಿರೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಳಿಕ ಠಾಣೆಯಲ್ಲಿ 
 ಬೈಕ್ ಸವಾರ ಮತ್ತು ಕಾರಿನಲ್ಲಿದ್ದ ಮೂವರು ಯುವಕರು ರಾಜಿಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


BREAKING NEWS
Loading latest news...
Join our WhatsApp Channel Powered By : Online Pudu