-->
ಆಳ್ವಾಸ್: ವೃತ್ತಿ ಮಾರ್ಗದರ್ಶನ ಮತ್ತು ಪ್ರೇರಣಾ ಉಪನ್ಯಾಸ

ಆಳ್ವಾಸ್: ವೃತ್ತಿ ಮಾರ್ಗದರ್ಶನ ಮತ್ತು ಪ್ರೇರಣಾ ಉಪನ್ಯಾಸ

ಆಳ್ವಾಸ್: ವೃತ್ತಿ ಮಾರ್ಗದರ್ಶನ ಮತ್ತು ಪ್ರೇರಣಾ ಉಪನ್ಯಾಸ





'ಬದುಕಿನ ಅರ್ಥವನ್ನು ಕಲಿಕೆಯ ಮೂಲಕ ಕಂಡುಕೊಳ್ಳಬೇಕು. ಆಗ ಮಾತ್ರ ಯಶಸ್ಸು ಲಭಿಸುತ್ತದೆ' ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹೇಳಿದರು.


ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘವು CA ಇಂಟರ್‍ಮೀಡಿಯೆಟ್ ಹಾಗೂ ಫೌಂಡೇಶನ್ ವಿದ್ಯಾರ್ಥಿಗಳಿಗೆ ವಿ.ಎಸ್. ಆಚಾಯ್ ಸಭಾಂಗಣದಲ್ಲಿ ಹಮ್ಮಿಕೊಂಡ ‘ವೃತ್ತಿ ಮಾರ್ಗದರ್ಶನ ಮತ್ತು ಪ್ರೇರಣಾ ಉಪನ್ಯಾಸ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಬದುಕಿಗೆ ಬದ್ಧತೆ ಇರಲಿ. ಉತ್ತಮ ಪರಿಸರವನ್ನು ನಿರ್ಮಿಸಿಕೊಳ್ಳಿ. ಯಶಸ್ಸು ಸಾಧಿಸಲು ಗುರಿ ಸ್ಥಿರವಾಗಿರಲಿ. ನಿರ್ದಿಷ್ಟ ದಿಕ್ಕಿನೆಡೆಗೆ ಸಾಗಿದಾಗ ಗುರಿ ಸಾಧಿಸಲು ಸಾಧ್ಯ ಎಂದರು.


ಲೆಕ್ಕ ಪರಿಶೋಧಕರು (CA) ಹಣದ ಲೆಕ್ಕಾಚಾರವನ್ನೇ ಮಾಡಿದರೂ, ಬದುಕಿನಲ್ಲಿ ಹಣ ಗಳಿಕೆಯೇ ಮುಖ್ಯವಾಗಬಾರದು. ಸಮಗ್ರ ಅಭಿವೃದ್ಧಿಯ ದೃಷ್ಟಿಕೋನ ಮುಖ್ಯ ಎಂದರು.

ಅದ್ವೈತ್ ಲರ್ನಿಂಗ್ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ನಿರ್ದೇಶಕ ಪುನರ್ವಸು ಜಯಕುಮಾರ್ ಕಲಿಕೆ ಹಾಗೂ ಸಿಎಯ ಮಹತ್ವವನ್ನು ತಿಳಿಸಿದರು. ಜ್ಞಾನವು ನಮ್ಮನ್ನು ಯಶಸ್ಸಿನೆಡೆಗೆ ಹೇಗೆ ಕೊಂಡೊಯ್ಯುತ್ತದೆ ಎಂಬುದನ್ನು ಉದಾಹರಿಸಿಕೊಂಡು ವಿವರಿಸಿದರು.


ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ, ವಾಣಿಜ್ಯ ವಿಭಾಗದ ಪ್ರಮಾತ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕಿ ರಶ್ಮಿನ್ ಕಾರ್ಯಕ್ರಮ ನಿರೂಪಿಸಿ, ಮೇಘನಾ ಧನ್ಯವಾದ ಸಮರ್ಪಿಸಿದರು.




Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article