ಮಂಗಳೂರು: ಶರವೇಗದಿಂದ ಬಂದ ಎಕ್ಸ್‌ಪ್ರೆಸ್‌ ಬಸ್ ನಿಂತಿದ್ದ ಬೈಕ್ ಗೆ ಢಿಕ್ಕಿ - ಸವಾರರಿಬ್ಬರು ಗಂಭೀರ ಗಾಯ

ಮಂಗಳೂರು: ಶರವೇಗದಿಂದ ಬಂದ ಎಕ್ಸ್‌ಪ್ರೆಸ್‌ ಬಸ್ಸೊಂದು ರಸ್ತೆ ದಾಟಲೆಂದು ನಿಂತಿದ್ದ ಬೈಕ್ ಗೆ ಢಿಕ್ಕಿ ಹೊಡೆದು ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳ್ಳಂಬೆಳಗ್ಗೆ 7.45ರ ವೇಳೆಗೆ ನಗರದ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ನಡೆದಿದೆ. ಅಪಘಾತದ ತೀವ್ರತೆಯ ವೀಡಿಯೋ ವೈರಲ್ ಆಗಿದೆ.

ಹಳೆಯಂಗಡಿ ಇಂದಿರಾ ನಗರ ನಿವಾಸಿ‌ ಮುಹಮ್ಮದ್ ಸಾಹಿಲ್ ಹಾಗೂ ಪಕ್ಷಿಕೆರೆ ಹೊಸಕಾಡು ನಿವಾಸಿ ಅರಾಫತ್ ಗಾಯಾಳುಗಳು.




ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಎಂಬಲ್ಲಿ ಬೈಕ್ ನಲ್ಲಿ ರಸ್ತೆ ದಾಟಲು ಡಿವೈಡರ್ ಬಳಿ ನಿಂತಿತ್ತು. ಈ ವೇಳೆ ಅತ್ಯಂತ ವೇಗದಲ್ಲಿ  ಬಂದ ಮಂಗಳೂರು - ಉಡುಪಿ ಎಕೆಎಂಎಸ್ ವೇಗದೂತ ಬಸ್ ರಸ್ತೆ ಬದಿ ನಿಂತಿದ್ದ ಬೈಕ್‌ ಗೆ ಢಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ನಿಂತಿದೆ. ಬಸ್ ಢಿಕ್ಕಿಯಾದ ಪರಿಣಾಮ ಯುವಕರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಯ ವೀಡಿಯೋ ಇದೀಗ ವೈರಲ್ ಆಗಿದೆ. 

ಈ ಬಗ್ಗೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BREAKING NEWS
Loading latest news...
Join our WhatsApp Channel Powered By : Online Pudu