32ರ ವಿವಾಹಿತನಿಂದ 8ರ ಬಾಲಕಿಯ ಅತ್ಯಾಚಾರಕ್ಕೆ ಯತ್ನ: ಕಾಮುಕ ಅರೆಸ್ಟ್
Tuesday, September 5, 2023
ಗಂಗಾವತಿ: ವಿವಾಹಿತನೊರ್ವನು ಪಕ್ಕದ ಮನೆಯ 8ರ ಬಾಲಕಿಯ ಮೇಲೆ ಆತ್ಯಾಚಾರಕ್ಕೆ ಯತ್ನಿಸಿರುವ ಪ್ರಕರಣ ನಗರದ ಅಂಗಡಿ ಸಂಗಣ್ಣ ಕ್ಯಾಂಪ್ ಸೋಮವಾರ ಮಧ್ಯಾಹ್ನ ನಡೆದಿದೆ.
ಇಸ್ಲಾಂಪೂರ ಮಸೀದಿಯಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಅಂಗಡಿ ಸಂಗಣ್ಣ ಕ್ಯಾಂಪ್ ಅಬ್ದುಲ್ ರಜಾಕ್ (32) ಅತ್ಯಾಚಾರಕ್ಕೆತ್ನಿಸಿದ ಕಾಮುಕ.
ಈತ ಮನೆಯ ಹತ್ತಿರದ 8 ವರ್ಷದ ಬಾಲಕಿಯನ್ನು ಪುಸಲಾಯಿಸಿ ಆತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಕಿರುಚಾಡಿದ್ದರಿಂದ ಪಾಲಕರು ಸ್ಥಳಕ್ಕೆ ದೌಡಾಯಿಸಿ ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಪಾಲಕರು ನೀಡಿದ ದೂರಿನ ಅನ್ವಯ ಪೊಕ್ಸೊ ಕಾಯ್ದೆಯಡಿ ಕೇಸ್ ದಾಖಲಿಸಿ ಅಬ್ದುಲ್ ರಜಾಕ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿವಾಹನಾಗಿರುವ ಆರೋಪಿಗೆ ಮೂವರು ಮಕ್ಕಳಿದ್ದಾರೆ.