ಮಾರ್ಗಿ ಶುಕ್ರನ ಪ್ರಭಾವ ಈ 3 ರಾಶಿಗಳ ಮೇಲೆ ಶುಭ ಫಲ! ನೀವು ಇನ್ನು ಮುಂದೆ ಮುಟ್ಟಿದ್ದೆಲ್ಲಾ ಚಿನ್ನ!



ಮಿಥುನ ರಾಶಿ: 
ಮಾರ್ಗಿ ಶುಕ್ರನು ಮಿಥುನ ರಾಶಿಯವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತಾನೆ. ಈ ಸಮಯದಲ್ಲಿ ಮಿಥುನ ರಾಶಿಯವರಿಗೆ ಬಾಕಿ ಉಳಿದಿರುವ ಹಣ ಕೈ ಸೇರುವುದರ ಜೊತೆಗೆ ಬಂಪರ್ ಆರ್ಥಿಕ ಲಾಭವೂ ಆಗಲಿದೆ. ಪೂರ್ವಜರ ಆಸ್ತಿ ವ್ಯಾಜ್ಯಗಳು ನಿಮ್ಮ ಪರವಾಗಿಯೇ ಆಗಲ್ಲಿದ್ದು ಹಣಕಾಸಿನ ಸ್ಥಿತಿ ಸುಧಾರಿಸಲಿದೆ. 

ಕನ್ಯಾ ರಾಶಿ: 
ಶುಕ್ರನ ನೇರ ಸಂಚಾರದಿಂದ ಕನ್ಯಾ ರಾಶಿಯವರಿಗೂ ಸಾಕಷ್ಟು ಪ್ರಯೋಜನಗಳಿವೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ವಿಜಯಲಕ್ಷ್ಮಿ ನಿಮ್ಮ ಪಾಳಿಗಿದ್ದು, ಆದಾಯದಲ್ಲೂ ಹೆಚ್ಚಳವಾಗಲಿದೆ. ವ್ಯಾಪಾರ-ವ್ಯವಹಾರದಲ್ಲಿ, ವೃತ್ತಿ ಬದುಕಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. 

ತುಲಾ ರಾಶಿ: 
ಮಾರ್ಗಿ ಶುಕ್ರನು ತುಲಾ ರಾಶಿಯವರಿಗೆ ವೃತ್ತಿ ಸಂಬಂಧಿತ ವಿಷಯದಲ್ಲಿ ಮಂಗಳಕರ ಫಲಿತಾಂಶಗಳನ್ನು ನೀಡುತ್ತಾನೆ. ಉದ್ಯೋಗಸ್ಥರಿಗೆ ಬಡ್ತಿ ಅವಕಾಶಗಳಿವೆ. ಇದಲ್ಲದೆ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಹೊಸ ಹೊಸ ಅವಕಾಶಗಳು ಕೂಡ ಲಭ್ಯವಾಗಲಿವೆ. ವ್ಯಾಪಾರಸ್ಥರಿಗೆ ಬಂಪರ್ ಆರ್ಥಿಕ ಲಾಭವಿರುತ್ತದೆ.