ಮೂಡುಬಿದಿರೆ: ಕಬ್ಬಿಣದ ಸೆಂಟ್ರಿಂಗ್ ಶೀಟ್, ಜಾಕ್ ಮತ್ತು ಪೈಪ್‌ ಕಳವು ಆರೋಪಿ ಅರೆಸ್ಟ್ - 2.50 ಲಕ್ಷದ ಸೊತ್ತು ವಶಕ್ಕೆ


ಮೂಡುಬಿದಿರೆ: ಇಲ್ಲಿನ ಬೆಳುವಾಯಿ ಹಾಗೂ ಕೆಸರುಗದ್ದೆ ಎಂಬಲ್ಲಿ ಕಬ್ಬಿಣದ ಸೆಂಟ್ರಿಂಗ್ ಶೀಟ್, ಕಬ್ಬಿಣದ ಜಾಕ್ ಮತ್ತು ಪೈಪ್‌ಗಳನ್ನು ಕಳವುಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೂಡುಬಿದಿರೆಯ ತೋಡಾರು ಗ್ರಾಮದ ಹಿದಾಯತ್ ನಗರ ನಿವಾಸಿ ಮುಹಮ್ಮದ್ ಸಾಹಿಲ್(21) ಬಂಧಿತ ಆರೋಪಿ.


ಸೊತ್ತು ಕಳವಿನ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸಿ ಗುರುವಾರ ಆರೋಪಿ ಸಾಹಿಲ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 2,50,000 ರೂ ಮೌಲ್ಯದ ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕಬ್ಬಿಣದ ಜಾಕ್ ಮತ್ತು ಕಬ್ಬಿಣದ ಪೈಪನ್ನು ಪೊಲೀಸರು ಸ್ವಾಧೀನಪಡಿಸಿದ್ದಾರೆ. ಈ ಪ್ರಕರಣದ ಹಿಂದಿರುವ ಉಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.