-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನನಗೆ 15ಮಂದಿ ಪತಿಯಂದಿರಿದ್ದಾರೆಂದು ಬೆತ್ತಲೆ ದೃಶ್ಯದಲ್ಲಿ ನಟಿಸಿದೆ - ಆದೈ ಸಿನಿಮಾ ಪಾತ್ರ ಮೆಲುಕು ಹಾಕಿದ ನಟಿ ಅಮಲಾ ಪೌಲ್

ನನಗೆ 15ಮಂದಿ ಪತಿಯಂದಿರಿದ್ದಾರೆಂದು ಬೆತ್ತಲೆ ದೃಶ್ಯದಲ್ಲಿ ನಟಿಸಿದೆ - ಆದೈ ಸಿನಿಮಾ ಪಾತ್ರ ಮೆಲುಕು ಹಾಕಿದ ನಟಿ ಅಮಲಾ ಪೌಲ್

ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಸಿನಿಮಾ ಮಾತ್ರವಲ್ಲದೆ, ವೈಯಕ್ತಿಕ ಜೀವನದಿಂದಲೂ ಬಹಳ ಸುದ್ದಿಯಾಗುತ್ತಿರುತ್ತಾರೆ. ನಿರ್ದೇಶಕ ವಿಜಯ್​ ರೊಂದಿಗಿನ ವಿವಾಹ ಹಾಗೂ ವಿಚ್ಛೇದನ​ ಬಹಳ ಚರ್ಚೆಯಾಗಿತ್ತು. ಅಲ್ಲದೆ, ಮಾಜಿ ಬಾಯ್​ಫ್ರೆಂಡ್​ ಜತೆಗಿನ ಲಿಪ್​ಲಾಕ್​ ಫೋಟೋಗಳು ವೈರಲ್​​ ಆಗಿದ್ದವು. ಇಷ್ಟೇ ಅಲ್ಲದೆ, ನೇರವಾಗಿ ಮಾತನಾಡುವ ಮೂಲಕ ವಿವಾದಗಳಿಂದಲೂ ಅಮಲಾ ಸುದ್ದಿಯಾಗಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಹಳೆಯ ಕ್ಷಣಗಳನ್ನು ಅಮಲಾ ಪೌಲ್ ಮೆಲಕು ಹಾಕಿದ್ದಾರೆ. ಬೆತ್ತಲೆಯಾಗಿ ನಟಿಸಿರುವ ಕೆಲವೇ ಕೆಲವು ನಟಿಯರಲ್ಲಿ ಅಮಲಾ ಕೂಡ ಒಬ್ಬರು. ಆದೈ ಸಿನಿಮಾದಲ್ಲಿ ಅಮಲಾ ಮೈಚಳಿ ಬಿಟ್ಟ ನಟಿಸಿದ್ದಾರೆ. ಈ ಕ್ಷಣಗಳನ್ನು ಮತ್ತೆ ಸಂದರ್ಶನದಲ್ಲಿ ಅಮಲಾ ಮೆಲಕು ಹಾಕಿದ್ದಾರೆ. ಆದೈ ಸಿನಿಮಾದಲ್ಲಿ ಬಟ್ಟೆ ಇಲ್ಲದೆ ನಟಿಸುವುದು ಸವಾಲಾಗಿತ್ತು. ಶೂಟಿಂಗ್​ ಸಮಯದಲ್ಲಿ ನನ್ನೊಂದಿಗೆ 15 ಮಂದಿ ಇದ್ದರು. ಒಬ್ಬ ಮಹಿಳೆಯೂ ಇರಲಿಲ್ಲ. ಕ್ಯಾಮೆರಾಮನ್, ಲೈಟ್ ಮ್ಯಾನ್, ಡೈರೆಕ್ಟರ್ ಹೀಗೆ 15 ಜನ ಕೆಲಸ ಮಾಡುತ್ತಿದ್ದರು.

ಇಷ್ಟು ಜನರ ಮುಂದೆ ಬಟ್ಟೆ ಇಲ್ಲದೆ ಹೇಗೆ ಪ್ರದರ್ಶನ ನೀಡುವುದು ಎಂಬ ಚಿಂತೆಯಲ್ಲಿದ್ದೆ. ಈ ಮನಃಸ್ಥಿತಿಯಲ್ಲಿದ್ದರೆ ದೃಶ್ಯಗಳು ಖಂಡಿತಾ ಸರಿಯಾಗಿ ಬರುವುದಿಲ್ಲ ಎಂದು ಅರಿವಾಯಿತು. ಹಾಗಾಗಿ ನನಗೆ ಈಗ 15 ಪತಿಯಂದಿರಿದ್ದಾರೆ ಎಂದು ಭಾವಿಸಿಕೊಂಡು ನಟಿಸಲು ಪ್ರಾರಂಭಿಸಿದೆ ಎಂದು ಮೆಲುಕು ಹಾಕಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಇದೇ ಸಿನಿಮಾದ ಸಿನಿಮ್ಯಾಟೋಗ್ರಾಫರ್​ ವಿಜಯ್​ ಕಾರ್ತಿಕ್​ ಕಣ್ಣನ್​ ಸವಾಲಿನ ದೃಶ್ಯದ ಬಗ್ಗೆ ಮಾತನಾಡಿದ್ದರು. ಆದೈ ಸಿನಿಮಾದಲ್ಲಿ ನಗ್ನ ದೃಶ್ಯವನ್ನು ಚಿತ್ರೀಕರಿಸುವುದು ತುಂಬಾ ಚಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ನಟಿ ಬೆತ್ತಲೆಯಾಗಿದ್ದಾರೆ ಎಂದು ತಿಳಿಯಿತು. ಅಶ್ಲೀಲ ವಿಷಯಗಳು ಬರದಂತೆ ಬಹಳ ಎಚ್ಚರ ವಹಿಸಿದ್ದೆವು. ಒಂದು ದೃಶ್ಯದಲ್ಲಿ ಅಮಲಾ ಪೌಲ್ ಶರ್ಟ್ ಹಾಕದೆ ಕುಳಿತಿದ್ದಾರೆ. ಆದರೆ, ಆ ದೃಶ್ಯದಲ್ಲಿ ಎಲ್ಲಿಯೂ ಅಶ್ಲೀಲತೆಯ ಸುಳಿವೂ ಇಲ್ಲ. ಇದಕ್ಕಾಗಿ ನಾವು ಸುಮಾರು 16 ಗಂಟೆಗಳ ಕಾಲ ಆ ದೃಶ್ಯವನ್ನು ಚಿತ್ರೀಕರಿಸಿದ್ದೇವೆ. ಶೂಟಿಂಗ್​ ಸಮಯದಲ್ಲಿ ಅಮಲಾ ಪೌಲ್ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗದಂತೆ ತುಂಬಾ ಎಚ್ಚರ ವಹಿಸಿದ್ದೇವೆ. ಒಂದು ವೇಳೆ ಅಮಲಾ ಬೆತ್ತಲೆಯಾಗಿ ನಟಿಸಲು ಒಪ್ಪದೇ ಇದ್ದಿದ್ದರೆ ಸಿನಿಮಾ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅಮಲಾ ಅವರು ಸದ್ಯ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಬ್ಲಸ್ಸಿ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ತಿಂಗಳ ಹಿಂದಷ್ಟೇ ಈ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಇದರಲ್ಲಿ ಪೃಥ್ವಿರಾಜ್​ ಮತ್ತು ಅಮಲಾ ನಡುವೆ ಲಿಪ್​ಲಾಕ್​ ದೃಶ್ಯವಿದೆ. ನಿಜವಾಗಿಯೂ ಲಿಪ್​ಲಾಕ್​ ಮಾಡಿರುವಂತೆ ನೈಜವಾಗಿ ಅಭಿನಯಿಸಿದ್ದಾರೆ. ಅಲ್ಲದೆ, ಈ ಲಿಪ್​ಲಾಕ್​ ದೃಶ್ಯದ ಬಗ್ಗೆ ಅಮಲಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತುಂಬಾ ಬೋಲ್ಡ್​ ಹೇಳಿಕೆ ನೀಡಿದ್ದರು.

ಈ ಸಿನಿಮಾಗೂ ನಾನು ಸಹಿ ಮಾಡುವ ಮುನ್ನ ಲಿಪ್​ಲಾಕ್​ ಇರುತ್ತದೆ ಎಂದು ನಿರ್ದೇಶಕರು ನನಗೆ ಹೇಳಿದರು. ನಾನು ಈ ಮುಂಚೆಯೇ ಓಕೆ ಎಂದಿದ್ದೆ. ಆ ದೃಶ್ಯಕ್ಕೆ ಲಿಪ್​ಲಾಕ್​ ಅವಶ್ಯಕತೆ ಇತ್ತು. ಹೀಗಾಗಿ ನಾನು ಮಾಡಿದೆ. ಇಷ್ಟೇ ಅಲ್ಲದೆ, ಕತೆ ಪೂರಕವಾಗಿದ್ದರೆ, ನಾನು ಬೆತ್ತಲೆಯಾಗಿ ನಟಿಸಲೂ ಕೂಡ ರೆಡಿ. ನಾನಿದನ್ನು ಈ ಹಿಂದೆಯೂ ಹೇಳಿದ್ದೇನೆ. ಬೆತ್ತಲೆಯಾಗಿಯೇ ನಟಿಸಲು ರೆಡಿಯಾಗಿರುವಾಗ ಈ ಲಿಪ್​ಲಾಕ್​ ದೃಶ್ಯವಲ್ಲ ಕಷ್ಟವೇ ಅಲ್ಲ ಎಂದು ಅಮಲಾ ಬೋಲ್ಡ್​ ಹೇಳಿಕೆ ನೀಡಿದ್ದರು.

Ads on article

Advertise in articles 1

advertising articles 2

Advertise under the article