-->
1000938341
ವೀಲಿಂಗ್ ವೇಳೆ ನಿಯಂತ್ರಣ ತಪ್ಪಿ ಯೂಟ್ಯೂಬರ್ 100 ಮೀ. ಸ್ಕಿಡ್ - ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲು

ವೀಲಿಂಗ್ ವೇಳೆ ನಿಯಂತ್ರಣ ತಪ್ಪಿ ಯೂಟ್ಯೂಬರ್ 100 ಮೀ. ಸ್ಕಿಡ್ - ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲು


ಚೆನ್ನೈ: ತಮಿಳುನಾಡಿನ ಜನಪ್ರಿಯ ಯೂಟ್ಯೂಬರ್ ಟಿಟಿಎಫ್ ವಾಸನ್ ಅವರು ಹೈ-ಸ್ಪೀಡ್ ಮೋಟಾರ್‌ಸೈಕಲ್ ಸವಾರಿ ಮತ್ತು ಸಾಹಸಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದರು. ಇದೀಗ ಅವರು ಸಾಹಸಮಯ ರೀತಿಯಲ್ಲಿ ವೀಲಿಂಗ್ ಮಾಡಲು ಹೋಗಿದ್ದಾರೆ. ಆಗ ಬೈಕ್​ನಿಯಂತ್ರಣ ಕಳೆದುಕೊಂಡ ಪರಿಣಾಮ 100 ಮೀ. ಸ್ಕಿಡ್​ ಆಗಿ ಬಿದ್ದ ಘಟನೆ ಭಾನುವಾರ ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ಸಂಭವಿಸಿದೆ.

ವಾಸನ್ ಒಂದಲ್ಲ ಒಂದು ರೀತಿಯ ವೀಲಿಂಗ್ ಮಾಡಿ ಬಹಳಷ್ಟು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದ ಯೂಟ್ಯೂಬರ್. ಭಾನುವಾರ ಚೆನ್ನೈ-ಕೊಯಮತ್ತೂರು ಮಾರ್ಗದಲ್ಲಿ ಸಾಗುವಾಗ ಬಹಳ ವೇಗದಲ್ಲಿ ಬೈಕ್​ನ ಚಲಾಯಿಸಿದ್ದಾರೆ. ಈ ವೇಳೆ ವೀಲಗ್ ಮಾಡಲು ಹೋಗಿದ್ದಾರೆ. ಆಗ ಬೈಕ್​ ನಿಯಂತ್ರಣ ತಪ್ಪಿ, 100 ಮೀ. ಉದ್ದ ಸ್ಕಿಡ್​ ಆಗಿ ಬಿದ್ದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಾಸನ್​ ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವರದಿಗಳ ಪ್ರಕಾರ, ಯೂಟ್ಯೂಬರ್ ಟಿಟಿಎಫ್ ವಾಸನ್ ಈ ಹಿಂದೆ ಹಲವು ಬಾರಿ ಟ್ರಾಫಿಕ್ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರು. ಈ ವೇಳೆ ಅನೇಕ ಸಂದರ್ಭ ಅಧಿಕಾರಿಗಳಿಗೆ ದಂಡ ಕಟ್ಟಿದ್ದಾರೆ. ಸ್ಟಂಟ್​ ವೇಳೆ ವಾಸನ್ ಹೆಲ್ಮೆಟ್​ ಧರಿಸಿದ್ದರಿಂದ ಅಪಘಾತದಿಂದ ಪಾರಾಗಿದ್ದಾರೆ. ತುರ್ತು ಚಿಕಿತ್ಸೆಗಾಗಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

Ads on article

Advertise in articles 1

advertising articles 2

Advertise under the article