-->
1000938341
ವಿವಾಹವಾಗುತ್ತೇನೆಂದು ನಂಬಿಸಿ ವಂಚನೆ: ರಾಜಕಾರಣಿ ವಿರುದ್ಧ ದೂರು ದಾಖಲಿಸಿದ ನಾಗಮಂಡಲ ನಟಿ ವಿಜಯಲಕ್ಷ್ಮಿ

ವಿವಾಹವಾಗುತ್ತೇನೆಂದು ನಂಬಿಸಿ ವಂಚನೆ: ರಾಜಕಾರಣಿ ವಿರುದ್ಧ ದೂರು ದಾಖಲಿಸಿದ ನಾಗಮಂಡಲ ನಟಿ ವಿಜಯಲಕ್ಷ್ಮಿ


ಚೆನ್ನೈ: ನಟಿ ವಿಜಯಲಕ್ಷ್ಮಿ ಇದೀಗ 'ನಾಮ್ ತಮಿಳ್ ಕಚ್ಚಿ’ ಪಕ್ಷದ ಅಧ್ಯಕ್ಷ ಸೀಮಾನ್ ವಿರುದ್ಧ ಹೊಸ ಆರೋಪ ಮಾಡಿದ್ದಾರೆ. ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

2008ರಲ್ಲಿ ‘ನಾಮ್ ತಮಿಳ್ ಕಚ್ಚಿ’ ಪಕ್ಷದ ಅಧ್ಯಕ್ಷ ಸೀಮಾನ್ ಹಾಗೂ ವಿಜಯಲಕ್ಷ್ಮಿ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಡಿತ್ತು. ಇದೀಗ ಆತ ತನ್ನನ್ನು ನಂಬಿಸಿ ಮೋಸ ಮಾಡಿದ್ದಾನೆಂದು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ ಸಂದೀಪ್ ರಾಯ್‌ ರಿಗೆ ವಿಜಯಲಕ್ಷ್ಮಿಯವರು ಸೀಮಾನ್ ವಿರುದ್ಧ ನೀಡಿದ್ದಾರೆ. ಕನಕಾಂಬರಿ, ನಾಗಮಂಡಲ, ಸೂರ್ಯವಂಶ ಸೇರಿದಂತೆ ಹಲವು ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಈಗ ತಮಿಳುನಾಡಿನಲ್ಲಿ ಸುದ್ದಿಯಲ್ಲಿದ್ದಾರೆ.

ವೀಡಿಯೋದಲ್ಲಿ 'ತಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಈ ವಿಡಿಯೋ ವೀಕ್ಷಿಸುತ್ತಿರುವ ಅಭಿಮಾನಿಗಳಿಗೆ ನಾನು ಹೇಳಲು ಬಯಸುತ್ತೇನೆ. ಸೀಮಾನ್ ನನಗೆ ಸಾಕಷ್ಟು ಹಿಂಸೆ ನೀಡಿದ್ದಾರೆ. ಓರ್ವ ಮಹಿಳೆಯಾಗಿ, ನಾನು ಅದನ್ನು ಸಹಿಸಿಕೊಂಡಿದ್ದೇನೆ. ಇದೀಗ ನಿರಂತರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೆ ಕಿರುಕುಳ ನೀಡುತ್ತಿದ್ದಾರೆ. ಈ ಪ್ರಕರಣದಿಂದ ಸೀಮಾನ್ ನನ್ನು ತಪ್ಪಿಸಿಕೊಳ್ಳಲು ಬಿಡಬೇಡಿ ಎಂದು ನನ್ನ ಅಭಿಮಾನಿಗಳಲ್ಲಿ ವಿನಂತಿಸುತ್ತೇನೆ. ಅವರು ಎಂದಿಗೂ ನಿರೀಕ್ಷಣಾ ಜಾಮೀನು ಪಡೆಯಬಾರದು. ನಾನು ಸೀಮಾನ್ ವಿಷಯಗಳನ್ನು ಹೊರಗೆ ತೆಗೆಯುತ್ತಿರುವೆ ಎಂದು ನನ್ನನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ನಾನು ಪಬ್ಲಿಸಿಟಿಗಾಗಿ ಇದನ್ನು ಮಾಡುತ್ತಿಲ್ಲ. ಆದರೆ ಅವರ ಕಡೆಯವರು ತಪ್ಪಾಗಿ ಬಿಂಬಿಸುತ್ತಿದ್ದಾರೆ. ನಾವು ಒಟ್ಟಿಗೆ ಕುಳಿತುಕೊಂಡು ಮಾತನಾಡಿಕೊಂಡು ಸೆಟಲ್ ಮಾಡಿಕೊಳ್ಳಬೇಕಾದ ವಿಷಯಗಳು ದೊಡ್ಡದಾಗಿದೆ. ಭವಿಷ್ಯದಲ್ಲಿ ಎಷ್ಟು ಬೆದರಿಕೆ ಬಂದರೂ ಹಿಂದೆ ಸರಿಯುವುದಿಲ್ಲ’ ಎಂದು ಮಾಧ್ಯಮಗಳ ಜೊತೆ ಮಾತನಾಡುತ್ತಾ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.

2020ರಲ್ಲಿ ನಟಿ ವಿಜಯಲಕ್ಷ್ಮಿಗೆ ಲೈಂಗಿಕ ಕಿರುಕುಳ ನೀಡಿದ್ದ ಪ್ರಕರಣದಲ್ಲಿ ಪನನ್‌ಗಟ್ಟು ಪದೈ ಕಟ್ಚಿ ಪಕ್ಷದ ಸ್ಥಾಪಕ ಹರಿ ನಾಡಾರ್‌ ಎಂಬಾತನನ್ನು ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. 2020ರಲ್ಲಿ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು, ಇದಕ್ಕೆ ಲೈಂಗಿಕ ಕಿರುಕುಳವೇ ಕಾರಣ ಎನ್ನಲಾಗಿತ್ತು. 2020ರ ಜುಲೈನಲ್ಲಿ ನಾಮ್‌ ತಮಿಳರ್‌ ಕಚ್ಚಿ (ಎನ್‌ಟಿಕೆ) ಪಕ್ಷದ ನಾಯಕ ಸೀಮನ್‌ ಕುಮ್ಮಕ್ಕಿನ ಮೇಲೆ ನಾಡಾರ್‌ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದರು.Ads on article

Advertise in articles 1

advertising articles 2

Advertise under the article