-->
1000938341
ಪಬ್ ಜಿ ಆಟಕ್ಕಾಗಿ ಸಾಲ : ಪಡೆದ ಹಣ ಕೊಡಲಾಗದೆ ನೇಣಿಗೆ ಶರಣಾಗಿ ವಿದ್ಯಾರ್ಥಿ ಆತ್ಮಹತ್ಯೆ

ಪಬ್ ಜಿ ಆಟಕ್ಕಾಗಿ ಸಾಲ : ಪಡೆದ ಹಣ ಕೊಡಲಾಗದೆ ನೇಣಿಗೆ ಶರಣಾಗಿ ವಿದ್ಯಾರ್ಥಿ ಆತ್ಮಹತ್ಯೆಕಲಬುರಗಿ: ಆನ್‍ಲೈನ್‍ ಗೇಮ್‍ ಗೆ ಮರುಳಾಗಿ ಲೀನನಾಗಿ ಹಣಕಟ್ಟಿ ಪಬ್‍ಜಿ ಆಟವಾಡುತ್ತಿದ್ದ ವಿದ್ಯಾರ್ಥಿಯೋರ್ವನು ಕೊನೆಗೆ ಮಾಡಿರುವ ಸಾಲ ತೀರಿಸಲಾಗದೇ ಸಾವಿಗೆ ಶರಣಾಗಿರುವ ಘಟನೆ ಕಲಬುರಗಿಯ ದೇವಿನಗರದಲ್ಲಿ ನಡೆದಿದೆ.

ಪ್ರವೀಣ್ ಪಾಟೀಲ್(20) ಮೃತ ವಿದ್ಯಾರ್ಥಿ. ‌ಈತ ಕಲಬುರಗಿಯ ದೇವಿನಗರ ತನ್ನ ಮನೆಯಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಪಬ್‍ಜಿ ಮೂಲತಃ ಬೆಟ್ಟಿಂಗ್‍ ಆಟವಲ್ಲ. ಆದರೆ, ಈ ಆಟದಲ್ಲಿ ಕೆಲವು ವಿಶಿಷ್ಟ ವರ್ಚ್ಯುವಲ್ ವಸ್ತುಗಳನ್ನು ಖರೀದಿ ಮಾಡಬಹುದು. ಇದರಿಂದ ಎದುರಾಳಿ ಆಟಗಾರ ಬಹಳ ಶಕ್ತಿಶಾಲಿ ಎಂಬ ಸಂದೇಶ ಇತರ ಆಟಗಾರರಿಗೆ ದೊರಕುತ್ತದೆ. ಅಂತಹ ವಸ್ತುಗಳನ್ನು ಖರೀದಿಸಲು ಈ ಯುವಕ ಸಾಲವನ್ನು ಮಾಡಿದ್ದಾನೆ.  

ಪ್ರವೀಣ್, ಕಲಬುರಗಿ ನಗರದ ಖಾಸಗಿ ಕಾಲೇಜ್ ನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದ. ಆತ ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್‍ ವಿಷಯದಲ್ಲಿ ಬಿಇ ಕೋರ್ಸ್ ಮಾಡುತ್ತಿದ್ದ. ಈತ, ಮೂಲತಃ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಸುಲಹಳ್ಳಿ ಗ್ರಾಮದ ನಿವಾಸಿಯಾಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article