ದಕ್ಷಿಣ ಕನ್ನಡ ಡಿಸಿಸಿ ಬ್ಯಾಂಕಿನಲ್ಲಿ 125 ಹುದ್ದೆಗಳಿಗೆ ನೇಮಕಾತಿ: ಹೆಚ್ಚಿನ ವಿವರ ಇಲ್ಲಿದೆ...

ಡಿಸಿಸಿ ಬ್ಯಾಂಕಿನಲ್ಲಿ 125 ಹುದ್ದೆಗಳಿಗೆ ನೇಮಕಾತಿ: ಹೆಚ್ಚಿನ ವಿವರ ಇಲ್ಲಿದೆ...





ಕರಾವಳಿಯ ಪ್ರತಿಷ್ಠಿತ ಕೇಂದ್ರ ಸಹಕಾರಿ ಬ್ಯಾಂಕ್ ಆಗಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನಲ್ಲಿ ಖಾಲಿ ಇರುವ 125 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.


ಹುದ್ದೆಯ ಹೆಸರು: ಕಂಪ್ಯೂಟರ್ ಪ್ರೋಗ್ರಾಮರ್ (2)

ಕಚೇರಿ ಸಹಾಯಕ (123)


ನೇರ ನೇಮಕಾತಿಯಿಂದ ಭರ್ತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮುಖಾಂತರ ಇಲ್ಲವೇ ನೇರವಾಗಿ ಕೇಂದ್ರ ಕಚೇರಿಗೆ ಬಂದು ಅರ್ಜಿಯನ್ನು ಸಲ್ಲಿಸಬಹುದಾಗಿದೆ.


ಅಭ್ಯರ್ಥಿಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.


ಅಭ್ಯರ್ಥಿಗಳು ಅರ್ಜಿಗಳನ್ನು ಪಡೆಯಬಹುದಾಗಿದೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20-09-2023


ಅರ್ಜಿಗಳಲ್ಲಿ ತಿಳಿಸಿರುವ ಮಾಹಿತಿಗಳ ಜೊತೆಗೆ ಪ್ರಮಾಣಪತ್ರದ ಪ್ರತಿಗಳೊಂದಿಗೆ 20-09-2023 ಸಂಜೆ 4-30ರ ಒಳಗಾಗಿ ಸಲ್ಲಿಸಲು ಕೋರಲಾಗಿದೆ.


ಅರ್ಜಿ ಶುಲ್ಕ ಪಾವತಿಸದ, ಅಪೂರ್ಣ ಹಾಗೂ ಕೊನೆಯ ದಿನಾಂಕದ ಬಳಿಕ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.


ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಕರೆದಲ್ಲಿ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲೇ ಹಾಜರಾಗತಕ್ಕದ್ದು.


ವಿದ್ಯಾರ್ಹತೆ: ಬಿ.ಕಾಂ, ಬಿಬಿಎ, ಬಿಸಿಎ ಅಥವಾ ತತ್‌ಸಮಾನ ಯಾ ಸ್ನಾತಕೋತ್ತರ ಪದವಿ

ವಯೋಮಿತಿ 18 ವರ್ಷದಿಂದ 35 ವರ್ಷದ ವರೆಗೆ


ಅರ್ಜಿಗಳನ್ನು ಸಲ್ಲಿಸಬೇಕಾದ ವಿಳಾಸ:

ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಕೊಡಿಯಾಲ್ ಬೈಲ್, ಮಂಗಳೂರು - 575 003


website: www.scdccbank.com