-->
1000938341
ಇನ್ನು ಮುಂದೆ ತನ್ನನ್ನು ಫಾತಿಮಾ ಎಂದು ಕರೆಯಿರಿ - ರಾಖಿ ಸಾವಂತ್ ವಿನಂತಿ

ಇನ್ನು ಮುಂದೆ ತನ್ನನ್ನು ಫಾತಿಮಾ ಎಂದು ಕರೆಯಿರಿ - ರಾಖಿ ಸಾವಂತ್ ವಿನಂತಿ

ಮುಂಬೈ: ಬಾಲಿವುಡ್​​ ನಟಿ ರಾಖಿ ಸಾವಂತ್ ಮೆಕ್ಕಾದ ಉಮ್ರಾ ಯಾತ್ರೆಯಿಂದ ವಾಪಸ್ ಆಗಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ ಆಕೆ, ‘ಇನ್ನು ಮುಂದೆ ತನ್ನನ್ನು ರಾಖಿ ಎಂದು ಕರೆಯಬೇಡಿ ನಾನಿನ್ನು ಫಾತಿಮಾ’ ಎಂದಿದ್ದಾರೆ. ಈ ವೀಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್ ವೈರಲ್​​ ಆಗಿದೆ.

ರಾಖಿ ಸಾವಂತ್ ಉಮ್ರಾದಿಂದ ಹಿಂತಿರುಗಿದ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ಪಡೆದರು. ಈ ವೇಳೆ ರಾಖಿ ಸಾವಂತ್​ ಬಿಳಿಬಣ್ಣದ ಬುರ್ಕಾ ಧರಿಸಿದ್ದರು. ಈ ವೇಳೆ ತನ್ನನ್ನು ರಾಖಿ ಎಂದು ಕರೆಯುವ ಬದಲು ಫಾತಿಮಾ ಎಂದು ಕರೆಯುವಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ. ಮಾಧ್ಯಮದೊಂದಿಗೆ ರಾಖಿ ಮಾತಾನಾಡುತ್ತಾ ಮೆಕ್ಕಾದ ಉಮ್ರಾ ಯಾತ್ರೆಯ ಬಗ್ಗೆ ಅನುಭವವನ್ನು ತಿಳಿಸಿದ್ದಾರೆ.

‘ದೇವರಿಗೆ ನಾನು ಇರುವ ಹಾಗೆಯೇ ಇಷ್ಟ. ಅದಕ್ಕಾಗಿ ಯಾವುದೇ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ. ಆದರೆ ಇನ್ಮುಂದೆ ತನ್ನನ್ನು ಫಾತಿಮಾ ಎಂದು ಕರೆಯಿರಿ ಎಂದಿದ್ದಾರೆ. ಅಲ್ಲದೆ ಮೆಕ್ಕಾ ಭೇಟಿಯ ಹಲವು ವಿಡಿಯೋಗಳನ್ನು ರಾಖಿ ಹಂಚಿಕೊಂಡಿದ್ದಾರೆ. ಆದರೆ ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
Ads on article

Advertise in articles 1

advertising articles 2

Advertise under the article