-->
1000938341
ಎಲ್ಲದಕ್ಕೂ ಒಂದು ಮಿತಿಯಿರಲಿ: ವೇದಿಕೆಯ ಮೇಲೆ ಸೀರೆ ಬಿಚ್ಚಿದ ನಟಿ ನೇಹಾ ಶೆಟ್ಟಿ ಮೇಲೆ ನೆಟ್ಟಿಗರು ಗರಂ

ಎಲ್ಲದಕ್ಕೂ ಒಂದು ಮಿತಿಯಿರಲಿ: ವೇದಿಕೆಯ ಮೇಲೆ ಸೀರೆ ಬಿಚ್ಚಿದ ನಟಿ ನೇಹಾ ಶೆಟ್ಟಿ ಮೇಲೆ ನೆಟ್ಟಿಗರು ಗರಂಹೈದರಾಬಾದ್: ಇತ್ತೀಚೆಗೆ ಸ್ಟಾರ್ ನಟ ವಿಜಯ್​ ದೇವರಕೊಂಡ ಅವರು “ಖುಷಿ” ಸಿನಿಮಾದ ಸಂಗಿತ ಸಂಜೆ ಕಾರ್ಯಕ್ರಮದಲ್ಲಿ ಶರ್ಟ್​ ಬಿಚ್ಚಿ ನಟಿ ಸಮಂತಾರೊಂದಿಗೆ ಹಾಟ್ ಆಗಿ ಡಾನ್ಸ್​ ಮಾಡಿದ್ದು, ಟ್ರೋಲ್​ ಆಗಿತ್ತು. ಇದೀಗ ಕನ್ನಡತಿ ನೇಹಾ ಶೆಟ್ಟಿ ವೇದಿಕೆ ಮೇಲೆಯೇ ಸೀರೆ ಬಿಚ್ಚಿ ಟ್ರೋಲ್​ ಆಗಿದ್ದಾರೆ.

ನಟ ವಿಶ್ವಾಕ್​ ಸೇನ್​ ಹಾಗೂ ನೇಹಾ ಶೆಟ್ಟಿ ''ಗ್ಯಾಂಗ್ಸ್​ ಆಫ್​ ಗೋದಾವರಿ'' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದರೆ ಸಿನಿಮಾದ ಪ್ರಚಾರದ ವೇಳೆ ನಟ - ನಟಿ ಇಬ್ಬರೂ ತಮ್ಮ ಮಿತಿಯನ್ನು ಮೀರಿ ವರ್ತಿಸಿದ್ದಾರೆ. ಸಿನಿಮಾದ ಮೊದಲ ಹಾಡು ಸುತ್ತಮ್ಲ ಸುಸಿ ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಹಾಡಿಗೆ ಯುವನ್​ ಶಂಕರ್​ ರಾಜಾ ಸಂಗೀತ​ ಸಂಯೋಜಿಸಿದ್ದಾರೆ. ಮೊನ್ನೆಯಷ್ಟೇ ಈ ಹಾಡು ಬಿಡುಗಡೆಯಾಗಿದೆ. ಪ್ರಚಾರದ ವೇಳೆ ವಿಶ್ವಾಕ್​ ಸೇನ್​ ಮತ್ತು ನೇಹಾ ಶೆಟ್ಟಿ ವೇದಿಕೆ ಮೇಲೆ ಮಾಡಿದ ಮೋಡಿ ಟಾಲಿವುಡ್​ನಲ್ಲಿ ಬಿಸಿ ಬಿಸಿ ಚರ್ಚೆಯಾಗಿದ್ದು, ಟ್ರೋಲಿಗೂ ಗುರಿಯಾಗಿದೆ.

ಬಿಡುಗಡೆಯಾದ ಹಾಡಿನಲ್ಲಿ ಹುಕ್​ ಸ್ಟೆಪ್ಸ್​ ಕೂಡಾ ಇದೆ. ಇದಕ್ಕೆ ನೇಹಾ ಮತ್ತು ವಿಶ್ವಾಕ್​ ವೇದಿಕೆ ಮೇಲೆಯೇ ಹೆಜ್ಜೆ ಹಾಕಿದರು. ಈ ವೇಳೆ ನೇಹಾ ತಮ್ಮ ಸೀರೆಯ ಒಂದು ಎಳೆಯನ್ನು ಬಿಚ್ಚಿ ವಿಶ್ವಾಕ್ ಮೇಲೆ ಹಾಕಿ ಹುಕ್​ ಸ್ಟೆಪ್ಸ್​ ಮಾಡಿದ್ದರು. ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ನೇಹಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್ಲದಕ್ಕೂಂದು ಮಿತಿ ಇದೆ. ವೇದಿಕೆ ಮೇಲೆ ಈ ರೀತಿ ನಡೆದುಕೊಳ್ಳಬಾರದು ಎಂದು ಒಂದು ವರ್ಗದ ಜನ ಸಾಮಾಜಿಕ ಜಾಲತಾಣದಲ್ಲಿ ಟೀಕಾ ಪ್ರಹಾರ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article