-->
1000938341
NCC: ಮಂಗಳೂರಿನ ಗೌತಮಿ ಪೂಜಾರಿ ರಾಷ್ಟ್ರಮಟ್ಟದ ಸಾಧನೆ

NCC: ಮಂಗಳೂರಿನ ಗೌತಮಿ ಪೂಜಾರಿ ರಾಷ್ಟ್ರಮಟ್ಟದ ಸಾಧನೆ


ಮಂಗಳೂರು: ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಕಲಾ ಪದವಿಯ ವಿದ್ಯಾರ್ಥಿನಿ, ಎನ್.ಸಿ.ಸಿ ಭೂದಳದ ಗೌತಮಿ ಪೂಜಾರಿ ಕೇರಳದ ತಿರುವನಂತಪುರದಲ್ಲಿ ಜುಲೈ 1 ರಿಂದ 15 ರವರೆಗೆ ನಡೆದ ಅಖಿಲ ಭಾರತ ಮಟ್ಟದ ಕ್ರೀಡಾ ಶೂಟಿಂಗ್ ಸ್ಪರ್ಧೆಯಲ್ಲಿ ಎನ್.ಸಿ.ಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದಾರೆ. ಇವರು ಪ್ರತಿನಿಧಿಸಿದ ನಿರ್ದೇಶನಾಲಯವು ಇಂಟರ್ ಡೈರಕ್ಟರೇಟ್ ಸ್ಪೋರ್ಟ್ಸ್ ಶೂಟಿಂಗ್ ಕಾಂಪಿಟೀಶನ್ (IDSSC- 2023) ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ವಿಜೇತ ತಂಡವನ್ನು ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಇತ್ತೀಚೆಗೆ ರಾಜಭವನದಲ್ಲಿ ಅಭಿನಂದಿಸಿದರು. ಕಾಲೇಜಿನ ಕೀರ್ತಿಪತಾಕೆಯನ್ನು ಎತ್ತರಕ್ಕೇರಿಸಿದ ವಿದ್ಯಾರ್ಥಿನಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Ads on article

Advertise in articles 1

advertising articles 2

Advertise under the article