-->
1000938341
ಆನ್ಲೈನ್ ಮೂಲಕ ಪಾಕಿಸ್ತಾನಿ ಯುವತಿಯನ್ನು ವಿವಾಹವಾದ ರಾಜಸ್ಥಾನದ ಯುವಕ

ಆನ್ಲೈನ್ ಮೂಲಕ ಪಾಕಿಸ್ತಾನಿ ಯುವತಿಯನ್ನು ವಿವಾಹವಾದ ರಾಜಸ್ಥಾನದ ಯುವಕ

ಜೈಪುರ: ಇತ್ತೀಚೆಗೆ ದೇಶ, ಗಡಿ ಮೀರಿದ ಪ್ರೇಮ, ವಿವಾಹ ಪ್ರಕರಣಗಳು ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿವೆ. ಪಾಕಿಸ್ತಾನದ ಸೀಮಾ ಹೈದರ್ ಭಾರತದ ಸಚಿನ್ ನನ್ನು ಹುಡುಕಿ ಬಂದರೆ ಭಾರತದ ಅಂಜು ಪಾಕಿಸ್ತಾನ ನುಸ್ರುಲ್ಲಗಾಗಿ ದೇಶ ತೊರೆದಳು. ಅಲ್ಲದೆ, ಶ್ರೀಲಂಕಾದ ಯುವತಿಯೊಬ್ಬಳು ಆಂಧ್ರಪ್ರದೇಶದ ಪ್ರಿಯಕರನನ್ನು ಹುಡುಕಿಕೊಂಡು ಬಂದಿದ್ದಾಳೆ. ಎಲ್ಲರೂ ತಮ್ಮ ತಮ್ಮ ಪ್ರಿಯಕರನನ್ನು ವಿವಾಹವಾಗಿ ಅವರೊಂದಿಗೆ ನೆಲೆಸಿದ್ದಾರೆ.

ಇದೀಗ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ, ಈ ಪ್ರಕರಣ ಉಳಿದ ಪ್ರಕರಣಗಳಿಂತ ಕೊಂಚ ವಿಭಿನ್ನವಾಗಿದೆ. ಅದೇನು ತಿಳಿಯಲು ಈ ಸುದ್ದಿ ನೋಡಿ.ವರಾಜಸ್ಥಾನದ ಜೋಧ್ಪುರ ಮೂಲದ ಅರ್ಬಾಜ್ ಪಾಕಿಸ್ತಾನದ ಅಮೀನಾ ಎಂಬಾಕೆಯನ್ನು ಮದುವೆ ಆಗಿದ್ದಾನೆ. ಮದುವೆ ಆಗಿರುವುದರಲ್ಲಿ ಏನು ವಿಶೇಷ ಎಂಬ ನಿಮ್ಮಲ್ಲಿ ಮೂಡದೇ ಇರದು. ಅದಕ್ಕೆ ಉತ್ತರ ಏನೆಂದರೆ, ಇಬ್ಬರು ಪರಸ್ಪರ ಜೊತೆಯಾಗಿ ಮದುವೆಯಾಗದೇ ಆನ್​ಲೈನ್​ ಮೂಲಕ ಮದುವೆಯಾಗಿದ್ದಾರೆ. ಅದಕ್ಕೆ ಕಾರಣವೂ ಇದೆ. ಆ ಕಾರಣ ಏನೆಂದರೆ, ಪಾಕಿಸ್ತಾನದ ಅಮೀನಾಗೆ ಭಾರತದ ವೀಸಾ ದೊರೆಯದಿದ್ದಕ್ಕೆ ಆನ್​ಲೈನ್​ನಲ್ಲಿಯೇ ಇಬ್ಬರು ಮದುವೆ ಆಗಿದ್ದಾರೆ. ​

ಇವರ ಆನ್ಲೈನ್ ವಿವಾಹ ಬುಧವಾರ ರಾತ್ರಿ ನಡೆದಿದೆ. ವಿಡಿಯೋ ಕಾನ್ಫರೆನ್ಸ್​ ಮೂಲಕವೇ ಮದುವೆಯ ಎಲ್ಲ ವಿಧಿ-ವಿಧಾನಗಳನ್ನು ಮಾಡಲಾಗಿದೆ. ಈ ನಿಖಾವನ್ನು ಭಾರತ ಮತ್ತು ಪಾಕಿಸ್ತಾನದ ಖಾಜಿಗಳು ನಿರ್ವಹಿಸಿದರು. ಎರಡೂ ಕಡೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಶುಭ ಸಮಾರಂಭದಲ್ಲಿ ಭಾಗವಹಿಸಿದರು. ಇಡೀ ಸಮಾರಂಭವನ್ನು ದೊಡ್ಡ ಎಲ್​ಇಡಿ ಪರದೆಯಲ್ಲಿ ಪ್ರದರ್ಶನ ಮಾಡಲಾಯಿತು. ಇದಕ್ಕೆ ಬಂಧು-ಬಳಗ ಮತ್ತು ಆಪ್ತರು ಸಾಕ್ಷಿಯಾದರು.

ಅಂದಹಾಗೆ ವರ ಅರ್ಬಾಜ್​, ಸಿವಿಲ್​ ಕಾಂಟ್ರ್ಯಾಕ್ಟರ್​ ಮೊಹಮ್ಮದ್​ ಅಫ್ಜಾಲ್​ ಅವರ ಕಿರಿಯ ಪುತ್ರ. ನವವಧುವಿನ ಭಾರತ ಪ್ರವೇಶಕ್ಕಾಗಿ ಶೀಘ್ರದಲ್ಲೇ ವೀಸಾಗೆ ಅರ್ಜಿ ಸಲ್ಲಿಸುವುದಾಗಿ ಅರ್ಬಾಜ್​ ಹೇಳಿದ್ದಾರೆ. ಪಾಕಿಸ್ತಾನದಲ್ಲಿ ನಮ್ಮ ಸಂಬಂಧಿಕರಿದ್ದಾರೆ. ಸಂಬಂಧಿಕರ ಮೂಲಕ ನಡೆದ ಅರೆಂಜ್​ ಮ್ಯಾರೇಜ್​ ಇದು. ಪ್ರಸ್ತುತ ಉಭಯ ದೇಶಗಳ ನಡುವಿನ ಸಂಬಂಧವು ಹದಗೆಟ್ಟಿರುವ ಕಾರಣ ನಾವು ಆನ್‌ಲೈನ್​ ಮೂಲಕ ಮದುವೆ ಆಗಿದ್ದೇವೆ. ವೀಸಾ ಪಡೆಯಲು ಸಾಕಷ್ಟು ಸಮಯ ತೆಗೆದುಕೊಳ್ಳುವುದರಿಂದ ವರ್ಚುವಲ್​ ಆಗಿ ಮದುವೆ ಆಗಲು ನಿರ್ಧರಿಸಿದೆವು ಎಂದು ಅರ್ಬಾಜ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಮದುವೆಯಾಗಲು ಹೋದರೆ, ಭಾರತದಲ್ಲಿ ಮದುವೆಯನ್ನು ಕಾನೂನುಬದ್ಧವಾಗಿ ಗುರುತಿಸುವುದಿಲ್ಲ. ಅಧಿಕೃತ ವಿವಾಹಕ್ಕಾಗಿ ತಮ್ಮ ತಾಯ್ನಾಡಿಗೆ ಮರಳುವ ಅವಶ್ಯಕತೆಯಿದೆ. ವಧುವಿನ ಆಗಮನದ ಬಗ್ಗೆ ಕುಟುಂಬವು ಸಹ ತುಂಬಾ ಉತ್ಸುಕತೆಯನ್ನು ಹೊಂದಿದೆ. ಇದು ಅರೇಂಜ್ಡ್ ಮ್ಯಾರೇಜ್ ಎಂದು ಅರ್ಬಾಜ್ ಹಂಚಿಕೊಂಡಿದ್ದಾರೆ. ಅರ್ಬಾಜ್ ಕುಟುಂಬದ ಸದಸ್ಯರಲ್ಲಿ ಒಬ್ಬರು ಈಗಾಗಲೇ ಅಮೀನಾ ಕುಟುಂಬದ ಇನ್ನೊಬ್ಬ ಯುವತಿಯನ್ನು ಮದುವೆಯಾಗಿದ್ದಾರೆ. 

Ads on article

Advertise in articles 1

advertising articles 2

Advertise under the article