-->
ರಾಜ್ಯ ಸರಕಾರ, ಮಳೆಯ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ

ರಾಜ್ಯ ಸರಕಾರ, ಮಳೆಯ ಬಗ್ಗೆ ಕೋಡಿಮಠ ಸ್ವಾಮೀಜಿ ಭವಿಷ್ಯ

ಹಾಸನ: ರಾಜ್ಯಸರ್ಕಾರ ಹಾಗೂ ಮಳೆಯ ಸ್ಥಿತಿಗತಿಗಳ ಕುರಿತು ಭವಿಷ್ಯ ನುಡಿದಿರುವ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ರಾಜ್ಯದಲ್ಲಿ ಮುಂದಿನ ಕಾರ್ತಿಕದವರೆಗೂ ಮಳೆಯಾಗಲಿದೆ. ಆದರೆ ತೊಂದರೆಯೇನಿಲ್ಲ ಎಂದು ಹೇಳಿದರು.

ಈ ಬಾರಿ ಈ ಮೊದಲೊಮ್ಮೆ ಮಳೆ ಬಂದಂತೆ, ಮತ್ತೊಂದು ಬಾರಿ ಅದೇ ರೀತಿ ಮಳೆ‌ಯಾಗಲಿದೆ. ಏನೂ ತೊಂದರೆಯಿಲ್ಲ, ಕಾಲ‌ ಹೇಳ್ತಿನಿ, ಅಷ್ಟೇ! ಮಳೆ‌ ಬರಲಿದೆ. ವಿಪರೀತ ಮಳೆಯಾಗುವ ಲಕ್ಷಣವಿದೆ, ಬೇಕಾದಷ್ಟು ಮಳೆ ಬೀಳಲಿದೆ. ಅನ್ನಕ್ಕೇನೂ ತೊಂದರೆ ಇಲ್ಲ. ಗುಡುಗು, ಭೂಮಿ ಬಿರುಕಾಗುವುದು, ದ್ವೇಷಗಳು ಹೆಚ್ಚುತ್ತವೆ. ಅಪಮೃತ್ಯು ಎಲ್ಲಾ ಸಂಭವಿಸುತ್ತದೆ. ಪ್ರಕೃತಿಯಿಂದಲೂ ಹಾನಿಯಿದೆ. ಶ್ರಾವಣದಲ್ಲೇ ಮಳೆಯ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ. ಶ್ರಾವಣದ‌ ಮಧ್ಯಭಾಗದಿಂದ ಕಾರ್ತಿಕದವರೆಗೂ ಮಳೆಯಾಗಲಿದೆ. ಮತ್ತೆ ಮಳೆಯಿಂದ ಅಪಾಯದ ಮುನ್ಸೂಚನೆಗಳಿವೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಬಗ್ಗೆಯೂ ಭವಿಷ್ಯ ನುಡಿದ ಕೋಡಿಶ್ರೀ, ಸ್ಮಶಾನದಲ್ಲಿ ಪಿಶಾಚಿ ಕುಣಿದಂತಾಗಿದೆ. ಏನು ಆಗುವುದಿಲ್ಲ. ನೋಡುವವರಿಲ್ಲ, ಕೇಳುವವರಿಲ್ಲ, ಆನಂದ ಪಡುವವರಿಲ್ಲ” ಎಂದು ಹೇಳಿದರು.

ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುವುದು ಪಾರ್ಲಿಮೆಂಟ್ ಎಲೆಕ್ಷನ್‌ ಆದ ಬಳಿಕ ತೀರ್ಮಾನವಾಗಲಿದೆ. ಪಾರ್ಲಿಮೆಂಟ್ ಚುನಾವಣೆ ಬಂದಾಗ ಏನಾಗುತ್ತದೆ ಮತ್ತು ಯಾವ ಸರ್ಕಾರ ಬರಲಿದೆ ಎಂಬುದನ್ನು ಹೇಳುತ್ತೇನೆ ಎಂದು ಭವಿಷ್ಯ ನುಡಿದಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article