KFDC ಯಿಂದ ಹೊಸ ಫಿಶ್ ಫ್ರೈ ಮಸಾಲ ಬಿಡುಗಡೆ
Thursday, August 31, 2023
ಮಂಗಳೂರು:- ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ತಯಾರಿಸಲಾದ ಹೊಸ ಬ್ರಾಂಡ್ ಫಿಶ್ ಫ್ರೈ ಮಸಾಲವನ್ನು ಮೀನುಗಾರಿಕೆ ಇಲಾಖೆಯ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್ ಇತ್ತೀಚೆಗೆ ನಗರದ ಹೊಯ್ದೆ ಬಜಾರ್‍ನಲ್ಲಿರುವ ಮೀನುಗಾರಿಕಾ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಶುದ್ಧೀಕರಿಸಿದ ಮೀನಿಗೆ ಹಳದಿ, ಉಪ್ಪು, ನಿಂಬೆ ರಸವನ್ನು ಕೆ.ಎಫ್.ಡಿ.ಸಿ ಫಿಶ್ ಫ್ರೈ ಮಸಾಲದೊಂದಿಗೆ ಬೆರೆಸಿ ಅರ್ಧದಿಂದ ಒಂದು ಗಂಟೆ ಸಮಯದ ನಂತರ ಖಾದ್ಯ ಎಣ್ಣೆಯಿಂದ ತವ/ಮಸಾಲ ಫ್ರೈ ಮಾಡಬಹುದು. ಇದನ್ನು ರೆಫ್ರಿಜರೇಟರ್‍ನಲ್ಲಿ ಸಂಗ್ರಹಿಸಬಹುದು ಹಾಗೂ ಈ ಉತ್ಪನ್ನ ನಿಗಮದ ಕೇಂದ್ರ ಕಚೇರಿ ಚಿಲಿಂಬಿ, ಬೆಂಗಳೂರು, ತುಮಕೂರು ಶಾಖೆಗಳು ಸೇರಿದಂತೆ ನಿಗಮದ ಎಲ್ಲಾ ಪ್ರಾಂಚೈಸಿಗಳಲ್ಲಿ ಲಭ್ಯವಿರುತ್ತದೆ. 200 ಗ್ರಾಂ ಪ್ಯಾಕ್‍ನ ಈ ಫಿಶ್ ಫ್ರೈ ಮಸಾಲಾದ ಬೆಲೆ 100 ರೂ.ಗಳಾಗಿದ್ದು, ಉದ್ಘಾಟನಾ ಕೊಡುಗೆಯಾಗಿ 90 ರೂ.ಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಕೆ. ಗಣೇಶ್, ಪ್ರಧಾನ ವ್ಯವಸ್ಥಾಪಕರಾದ ಎಂ. ಮಹೇಶ್ ಕುಮಾರ್, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಹರೀಶ್ ಕುಮಾರ್ ಹಾಗೂ ಕಾರವಾರದ ಜಂಟಿ ನಿರ್ದೇಶಕ ಬಿಪಿನ್ ಬೋಪಣ್ಣ, ಮಲ್ಪೆ ಜಂಟಿ ನಿರ್ದೇಶಕ ವಿವೇಕ್ ಆರ್., ಹಿಂದುಸ್ತಾನ್ ಪೆಟ್ರೋಲಿಯಂಕಾರ್ಪೋರೇಶನ್ ಡಿಜಿಎಂ ಅಮೂಲ್ಯ ದಾಸ್ ಮತ್ತು ಮೀನುಗಾರಿಕೆ ಉಪ ನಿರ್ದೇಶಕ ದಿಲೀಪ್ ಕುಮಾರ್ ಉಪಸ್ಥಿತರಿದ್ದರು.