-->
1000938341
ಆಹ್ವಾನಿತರು ಮನೆಗೆ ಬರುತ್ತಿದ್ದಂತೆ ಈಕೆ ಬಿಕನಿಯಲ್ಲೇ ಸ್ವಾಗತಿಸುತ್ತಾಳೆ: ಬೆಂಗಳೂರು ಪೊಲೀಸ್ ಬಲೆಗೆ ಬಿದ್ದ ಮುಂಬೈ ಖತರ್ನಾಕ್ ಲೇಡಿಯ ಹನಿಟ್ರ್ಯಾಪ್ ಕಥೆ

ಆಹ್ವಾನಿತರು ಮನೆಗೆ ಬರುತ್ತಿದ್ದಂತೆ ಈಕೆ ಬಿಕನಿಯಲ್ಲೇ ಸ್ವಾಗತಿಸುತ್ತಾಳೆ: ಬೆಂಗಳೂರು ಪೊಲೀಸ್ ಬಲೆಗೆ ಬಿದ್ದ ಮುಂಬೈ ಖತರ್ನಾಕ್ ಲೇಡಿಯ ಹನಿಟ್ರ್ಯಾಪ್ ಕಥೆ

ಬೆಂಗಳೂರು: ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್​ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಖತರ್ನಾಕ್​ ಮಾಡೆಲ್​ ಓರ್ವಳನ್ನು ಪುಟ್ಟೇನಹಳ್ಳಿಯ ಪೊಲೀಸರು ಬಂಧಿಸಿದ್ದಾರೆ.

ನೇಹಾ ಅಲಿಯಾಸ್​ ಮೆಹರ್ ಬಂಧಿತ ಆರೋಪಿತೆ. ನೇಹಾಳನ್ನು ಮುಂಬೈನಲ್ಲಿ ಬಂಧಿಸಿರುವ ಪುಟ್ಟೇನಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಇದೇ ಪ್ರಕರಣದಲ್ಲಿ ಆರೋಪಿಗಳಾದ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಈ ಮೊದಲೇ ಬಂಧಿಸಲಾಗಿದೆ. ಇವರು ನೀಡಿರುವ ಮಾಹಿತಿಯನ್ವಯ ನೇಹಾಳನ್ನು ಬಂಧಿಸಲಾಗಿದೆ. ಹನಿಟ್ರ್ಯಾಪ್​ ಜಾಲಕ್ಕೆ ಕೆಡವಲು ಆರೋಪಿಗಳು ‘ಕತ್ನಾ’ ಅಸ್ತ್ರ ಪ್ರಯೋಗ ಮಾಡುತ್ತಿದ್ದರು. ಬಾಂಬೆ ಮಾಡೆಲ್ ಇಟ್ಟುಕೊಂಡು ಆರೋಪಿಗಳು ಮಿಕಾಗಳಿಗೆ ಬಲೆ ಬೀಸುತ್ತಿದ್ದರು ಎಂದು ತಿಳಿದುಬಂದಿದೆ.

ನೇಹಾ, ಟೆಲಿಗ್ರಾಮ್ ಮೂಲಕ ಹನಿಟ್ರ್ಯಾಪ್ ಬಲೆಗೆ ಕೆಡವರು ಹಲವರನ್ನು ಸಂಪರ್ಕಿಸುತ್ತಿದ್ದಳು. ಬಳಿಕ ಬಣ್ಣದ ಮಾತುಗಳಿಂದ ಅವರನ್ನು ಮರಳು ಮಾಡುತ್ತಿದ್ದಳು. ನೋಡಲು ಸುಂದರವಾಗಿರುವುದರಿಂದ ಕೆಲವರು ಆಕೆಯ ಬಲೆಗೆ ಬಿದ್ದಿದ್ದಾರೆ. ಹೀಗೆ ಬಲೆಗೆ ಬಿದ್ದವರನ್ನು ಲೈಂಗಿಕ ಕ್ರಿಯೆಗೆಂದು ಮನೆಯೊಂದಕ್ಕೆ ಕರೆಸಿಕೊಳ್ಳುತ್ತಿದ್ದಳು. ಆಕೆಯ ಮಾತು ನಂಬಿ ಸಂತ್ರಸ್ತರು ಜೆಪಿ ನಗರದ ಐದನೇ ಹಂತದಲ್ಲಿರುವ ಮನೆಗೆ ಬರುತ್ತಿದ್ದರು. ಮನೆಯ ಬೆಲ್ ಮಾಡುತ್ತಿದ್ದಂತೆ ಈ ಸುಂದರಿ ಬಿಕಿನಿಯಲ್ಲಿಯೇ ಸ್ವಾಗತ ಕೋರುತ್ತಿದ್ದಳು.

ಬಿಕಿನಿಯಲ್ಲೇ ಈಕೆಯ ಲೈಂಗಿಕ ಸುಖಕ್ಕಾಗಿ ಹಾತೊರೆದು ಬರುವವರನ್ನು ಒಮ್ಮೆ ತಬ್ಬಿಕೊಂದು ಮನೆಗೆ ಸ್ವಾಗತಿಸುತ್ತಿದ್ದಳು. ಬಳಿಕ ಆಕೆಯೊಂದಿಗೆ ನಡೆಯುತ್ತಿದ್ದ ರಂಗಿನಾಟದ ಹಸಿಬಿಸಿ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗುತ್ತಿತ್ತು. ಅವರು ಈಕೆಯ ಮನೆ ಪ್ರವೇಶಿಸಿದ ಮೂರೆ ನಿಮಿಷಕ್ಕೆ ಉಳಿದ ಆರೋಪಿಗಳು ಅಲ್ಲಿಗೆ ಬರುತ್ತಿದ್ದರು. ಬಳಿಕ ಇವರ ಈ ಹಸಿಬಿಸಿ ದೃಶ್ಯವನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಳ್ಳುತ್ತಿದ್ದರು. ಇದೆಲ್ಲ ಮಾಡುವುದಕ್ಕೂ ಮುನ್ನ ಸಂತ್ರಸ್ತರಿಂದ ಮೊಬೈಲ್​ ಕಸಿದುಕೊಳ್ಳುತ್ತಿದ್ದರು. ಮೊಬೈಲ್​ನಲ್ಲಿರುವ ಎಲ್ಲ ನಂಬರ್ ಅನ್ನು ನೋಟ್ ಮಾಡಿಕೊಳ್ತಿದ್ದರು.

ಇಷ್ಟೆಲ್ಲಾ ಆದ ಬಳಿಕ ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಹಣ ಕೊಡದಿದ್ದರೆ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ. ಆಕೆಯನ್ನು ಮದುವೆ ಆಗುವಂತೆ ಡ್ರಾಮಾ ಮಾಡುತ್ತಿದ್ದರು. ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕಿ, ಮುಸ್ಲಿಂ ಆಗಿ ಕನ್ವರ್ಟ್ ಆಗುವಂತೆ ಬೆದರಿಕೆ ಹಾಕುತ್ತಿದ್ದರು.

ಇದರಿಂದ ಹೆದರಿ ಹಣ ವರ್ಗಾವಣೆ ಮಾಡಿದ ಸಂತ್ರಸ್ತ ಬಳಿಕ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಈ ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಸದ್ಯಕ್ಕೆ ಬಂಧಿಸಲಾಗಿದೆ. ಇದೇ ರೀತಿ 12 ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ. ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ವರ್ಗಾಯಿಸಿಕೊಂಡಿರುವುದಾಗಿ ತಿಳಿದುಬಂದಿದ್ದು, ಪುಟ್ಟೇನಹಳ್ಳಿ ಪೊಲೀಸರಿಂದ ಮುಂದುವರೆದ ತನಿಖೆ ಮುಂದುವರಿದಿದೆ.

Ads on article

Advertise in articles 1

advertising articles 2

Advertise under the article