-->
1000938341
ಸರ್ಕಾರಿ ಕೆಲಸಕ್ಕೆ ನೇಮಕಾತಿ ವೇಳೆ ಮಹಿಳಾ ಅಭ್ಯರ್ಥಿಗಳ ಎದೆಯಳತೆ ತೆಗೆದುಕೊಳ್ಳುವುದು ತಪ್ಪು: ಆಕೆಯ ಘನತೆ, ಗೌರವ, ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದ ಹೈಕೋರ್ಟ್

ಸರ್ಕಾರಿ ಕೆಲಸಕ್ಕೆ ನೇಮಕಾತಿ ವೇಳೆ ಮಹಿಳಾ ಅಭ್ಯರ್ಥಿಗಳ ಎದೆಯಳತೆ ತೆಗೆದುಕೊಳ್ಳುವುದು ತಪ್ಪು: ಆಕೆಯ ಘನತೆ, ಗೌರವ, ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದ ಹೈಕೋರ್ಟ್


ರಾಜಸ್ತಾನ: ಸರ್ಕಾರಿ ಕೆಲಸಕ್ಕೆ ನೇಮಕಾತಿ ಪ್ರಕ್ರಿಯೆ ವೇಳೆ ಮಹಿಳಾ ಅಭ್ಯರ್ಥಿಗಳ ಎದೆಯ ಅಳತೆ ತೆಗೆದುಕೊಳ್ಳುವ ಮಾನದಂಡವನ್ನು ರಾಜಸ್ಥಾನ ಹೈಕೋರ್ಟ್ ಖಂಡಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಆದರೆ ಎದೆಯ ಅಳತೆ ಮಾನದಂಡಗಳನ್ನು ಪೂರೈಸದ ಹಿನ್ನೆಲೆಯಲ್ಲಿ ಅನರ್ಹಗೊಂಡ ಮೂವರು ಮಹಿಳಾ ಅಭ್ಯರ್ಥಿಗಳ ಮನವಿಯನ್ನು ನ್ಯಾಯಮೂರ್ತಿ ದಿನೇಶ್ ಮೆಹ್ತಾರವರ ಏಕಪೀಠವು ವಿಚಾರಣೆ ನಡೆಸಿದ್ದಾರೆ.‌ ನೇಮಕಾತಿ ಪ್ರಕ್ರಿಯೆ ಮುಗಿದಿದೆ ಎಂಬ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಿದ ಪೀಠವು, ಎದೆಯ ಮಾಪನದ ಮಾನದಂಡವನ್ನು ಮರು ಮೌಲ್ಯಮಾಪನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ, ಅರಣ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ.

ನೇಮಕಾತಿ ಪ್ರಕ್ರಿಯೆ ಮುಗಿದಿರುವುದರಿಂದ ಮತ್ತು ಅರ್ಜಿದಾರರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಎದೆಯ ಅಳತೆ ಪರೀಕ್ಷೆಗೆ ಒಳಗಾಗಿದ್ದಾರೆ. ಆದ್ದರಿಂದ ಪೂರ್ಣಗೊಂಡ ನೇಮಕಾತಿಗೆ ನ್ಯಾಯಾಲಯ ಅಡ್ಡಿಪಡಿಸುವುದಿಲ್ಲ. ಆದರೆ, ಮಹಿಳಾ ಅಭ್ಯರ್ಥಿಗಳಿಗೆ ಎದೆಯ ಮಾಪನದ ಅವಶ್ಯಕತೆಯ ಬಗ್ಗೆ ಸಂಪೂರ್ಣ ಪರಿಶೀಲನೆ ಅಥವಾ ಅವಲೋಕನವು ಅತ್ಯಗತ್ಯವಾಗಿರುತ್ತದೆ. ಅದು ಅರಣ್ಯ ಸಿಬ್ಬಂದಿ, ಅರಣ್ಯಾಧಿಕಾರಿಗಳು ಅಥವಾ ಯಾವುದೇ ಇತರ ಹುದ್ದೆಗಳ ನೇಮಕಾತಿಗೆ ಅನ್ವಯಿಸುತ್ತದೆ. ಶ್ವಾಸಕೋಶದ ಸಾಮರ್ಥ್ಯವನ್ನು ನಿರ್ಧರಿಸಲು ವಿಸ್ತರಣೆಯನ್ನು ಅಳೆಯುವುದು ಅರ್ಥವಾಗುವಂತಹದ್ದಾಗಿದೆ. ಆದರೆ ‘ಕನಿಷ್ಠ ಎದೆಯ ಸುತ್ತಳತೆ’ ಕಡ್ಡಾಯವಾಗಿದೆ ಎಂಬುದು ಒಪ್ಪುವಂಥಾ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಹುದ್ದೆಗೆ ನಿಯೋಜಿಸಲು ಮಹಿಳೆಯ ಎದೆಯ ಗಾತ್ರವು ಅಪ್ರಸ್ತುತವಾಗಿದೆ. ಆಕೆಯ ದೈಹಿಕ ಸಾಮರ್ಥ್ಯವನ್ನು ನಿರ್ಧರಿಸಲು ಇಂಥಾ ಪರೀಕ್ಷೆಯ ಅಗತ್ಯವಿಲ್ಲ . ‘ಮಹಿಳೆಯ ಎದೆಯ ಅಳತೆಯನ್ನು ತೆಗೆದುಕೊಳ್ಳುವುದು, ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಮಹಿಳೆಯ ಘನತೆ ಮತ್ತು ಆಕೆಯ ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ನ್ಯಾಯಮೂರ್ತಿ ದಿನೇಶ್‌ ಮೆಹ್ತಾ ಹೇಳಿದರು.

Ads on article

Advertise in articles 1

advertising articles 2

Advertise under the article