ಸಹೋದರಿಯರ ಸಾಮೂಹಿಕ ಅತ್ಯಾಚಾರ ಪ್ರಕರಣ- ನಾಲ್ವರು ದೋಷಿಗಳು



ಲಖಿಂಪುರ ಕೇರಿ: ವರ್ಷದ ಹಿಂದೆ ಇಲ್ಲಿ ನಡೆದ ದಲಿತ ಸಹೋದರಿಯರ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳ ಪೈಕಿ ನಾಲ್ವರು ದೋಷಿಗಳೆಂದು ಶುಕ್ರವಾರ ಇಲ್ಲಿನ 'ಪೋಕ್ಸೋ' ವಿಶೇಷ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ ಎಂದು ಸರ್ಕಾರದ ಪರ ವಕೀಲ ತಿಳಿಸಿದ್ದಾರೆ.

ನಾಲ್ವರು ಅಪರಾಧಿಗಳ ಶಿಕ್ಷೆಯ ವಿಚಾರಣೆಯನ್ನು ಆಗಸ್ಟ್ 14ರಂದು ನಡೆಸಲಾಗುವುದು ನ್ಯಾಯಾಲಯವು ತಿಳಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬ್ರಿಜೇಶ್ ಪಾಂಡೆ ತಿಳಿಸಿದ್ದಾರೆ.

ನಿಘಾಸಾನ್ ಪ್ರದೇಶದ ಹಳ್ಳಿಯೊಂದರಲ್ಲಿ 2022ರ ಸೆ. 14ರಂದು ಅಪ್ರಾಪ್ತ ವಯಸ್ಸಿನ ಇಬ್ಬರು ದಲಿತ ಸಹೋದ ರಿಯರನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಮರಕ್ಕೆ ನೇಣುಹಾಕಿ ಹತ್ಯೆ ಮಾಡಲಾಗಿತ್ತು.