ಮಂಗಳೂರು: ವಿದ್ಯಾರ್ಥಿಯನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ


ಮಂಗಳೂರು: ಖಾಸಗಿ ಕಾಲೇಜಿನ ವಿದ್ಯಾರ್ಥಿಯನ್ನು ಕಿಡ್ನ್ಯಾಪ್ ಮಾಡಿ ನಶೆಯಲ್ಲಿದ್ದ ವಿದ್ಯಾರ್ಥಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲ್ಯಾಟ್ ನಲ್ಲಿ ನಡೆದಿದೆ‌.

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹೀಂ(18) ಹಲ್ಲೆಗೊಳಗಾದ ವಿದ್ಯಾರ್ಥಿ. ಹನಾನ್, ತಬೀಶ್ ಹಾಗೂ ವಿದ್ಯಾರ್ಥಿಗಳ ತಂಡದಿಂದ ದಾಳಿ ನಡೆದಿದೆ.


ಇಬ್ರಾಹಿಂ ಫಾಹೀಂ ಮಂಗಳೂರು ನಗರದ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ. ಮಂಗಳೂರಿನ ಬಲ್ಮಠ ಬಳಿಯ ಯೆನಪೊಯ ಕಾಲೇಜಿನ  ವಿದ್ಯಾರ್ಥಿಗಳು ಫಾಹಿಂನನ್ನು ಅಪಹರಿಸಿ ಹಲ್ಲೆ ನಡೆಸಿದ್ದಾರೆ. ಹುಡುಗಿಯ ವಿಚಾರಕ್ಕೆ ಈತನನ್ನು ಕಿಡ್ನಾಪ್ ಮಾಡಿರುವ ವಿದ್ಯಾರ್ಥಿಗಳು ಖಾಸಗಿ ಫ್ಲ್ಯಾಟ್ ನಲ್ಲಿ ಕೂಡಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ. ಥಳಿತದಿಂದ ಆತನ ಬೆನ್ನಿನಲ್ಲಿ ಕಂಪು ಬಾಸುಂಡೆ ಬಂದಿದೆ.  


ಹಲ್ಲೆ ನಡೆಸಿದ್ದವರು ಗಾಂಜಾ ನಶೆಯಲ್ಲಿದ್ದರು ಎನ್ನಲಾಗಿದೆ. ಸದ್ಯ ಗಾಯಗೊಂಡ ಫಾಹಿಂ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಬಂದರು ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನ ಬಂಧನವಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.