-->
1000938341
ಮಂಗಳೂರು: ಆಸ್ಪತ್ರೆಯಲ್ಲಿಯೇ ಅಪ್ರಾಪ್ತ ವಿಶೇಷ ಚೇತನೆ ಮೇಲೆ ಹೇಯ ಕೃತ್ಯ ಎಸಗಿದ ಕಾಮುಕ ಸೇರಿ ಸಹಕರಿಸಿದಾಕೆಯೂ ಅರೆಸ್ಟ್

ಮಂಗಳೂರು: ಆಸ್ಪತ್ರೆಯಲ್ಲಿಯೇ ಅಪ್ರಾಪ್ತ ವಿಶೇಷ ಚೇತನೆ ಮೇಲೆ ಹೇಯ ಕೃತ್ಯ ಎಸಗಿದ ಕಾಮುಕ ಸೇರಿ ಸಹಕರಿಸಿದಾಕೆಯೂ ಅರೆಸ್ಟ್


ಮಂಗಳೂರು: ಆಸ್ಪತ್ರೆಯಲ್ಲಿಯೇ ಕಾಮುಕನೋರ್ವನು ಅಪ್ರಾಪ್ತ ವಿಶೇಷ ಚೇತನೆ ಮೇಲೆ ತನ್ನ ಕಾಮ ಅಟ್ಟಹಾಸ ಮೆರೆದಿದ್ದಾನೆ. ಇದೀಗ ಕಾಮುಕ ಸೇರಿದಂತೆ ಆತನಿಗೆ ಸಹಕರಿಸಿದ ಮಹಿಳೆ ಮಂಗಳೂರು ಮಹಿಳಾ ಠಾಣಾ ಪೊಲೀಸ್ ಅತಿಥಿಗಳಾಗಿದ್ದಾರೆ.

ಮುಂಬೈ ನಿವಾಸಿ ಅಬ್ದುಲ್ ಹಲೀಂ(37) ಹಾಗೂ ಕುಲಶೇಖರ ನಿವಾಸಿ ಶಮೀನಾ ಬಾನು(22) ಬಂಧಿತ ಆರೋಪಿಗಳು.

ಈ ಕೃತ್ಯ ನಗರದ ಪಂಪ್ ವೆಲ್ ಬಳಿಯಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಮನ್ಸೂರ್ ಅಹ್ಮದ್ ಬಾಬಾ ಶೇಖ್ ಹಾಗೂ ಬಿಹಾರ ಮೂಲದ ಸದ್ಯ ಮುಂಬೈ ವಾಸಿ ಅಬ್ದುಲ್ ಹಲೀಂ ಆಗಸ್ಟ್ 10ರಂದು ಬೈಕ್ ನಲ್ಲಿ ಕಾಸರಗೋಡಿನಿಂದ ಮರಳುತ್ತಿದ್ದರು. ಈ ವೇಳೆ ಮಂಜೇಶ್ವರ ಹೊಸಂಗಡಿ ಬಳಿ ಬೈಕ್ ಅಪಘಾತಗೊಂಡಿದೆ. ಇಬ್ಬರೂ ಗಾಯಾಳುಗಳನ್ನು ಮಂಗಳೂರಿನ ಪಂಪ್ ವೆಲ್ ಬಳಿಯಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತು. ಗಾಯಾಳು ತಮ್ಮನನ್ನು ನೋಡಲು ಮನ್ಸೂರ್ ಅಹ್ಮದ್ ಸಹೋದರಿ ತನ್ನ ವಿಶೇಷ ಚೇತನೆ ಅಪ್ರಾಪ್ತ ಪುತ್ರಿ ಹಾಗೂ ಮನ್ಸೂರ್ ಪತ್ನಿ ಶಮೀನಾ ಬಾನುವಿನೊಂದಿಗೆ ಆಸ್ಪತ್ರೆಗೆ ಬಂದಿದ್ದರು‌.

ಬಳಿಕ ಆಕೆ ತನ್ನ ಪುತ್ರಿ ಹಾಗೂ ಶಮೀನಾ ಬಾನುವನ್ನು ಆಸ್ಪತ್ರೆಯಲ್ಲೇ ಬಿಟ್ಟು ಹೊರಗಡೆ ಹೋಗಿದ್ದರು‌. ಈ ವೇಳೆ ಆರೋಪಿ ಅಬ್ದುಲ್ ಹಲೀಂ ಗಾಯಾಳು ಮನ್ಸೂರ್ ಪತ್ನಿ ಶಮೀನಾ ಬಾನುವಿನೊಂದಿಗೆ ಆಸ್ಪತ್ರೆಯೊಳಗಡೆಯೇ ಲೈಂಗಿಕ ಸಂಪರ್ಕ ಮಾಡಿದ್ದಾನೆ. ಇದನ್ನು ವಿಶೇಷ ಚೇತನೆ ಅಪ್ರಾಪ್ತೆ ನೋಡಿದ್ದಾಳೆ. ಇದನ್ನು ಗಮನಿಸಿದ ಶಮೀನಾ ಬಾಲಕಿಯನ್ನು ಬೆಡ್ ಮೇಲೆ ಕುಳ್ಳಿರಿಸಿದ್ದಾಳೆ. ಆಗ ಆರೋಪಿ ಆಕೆಯ ಮೇಲೂ ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಇದಕ್ಕೆ ಪ್ರತಿರೋಧ ಒಡ್ಡಿದಾಗ ಶಮೀನಾ ಬಾನು ಅತ್ಯಾಚಾರ ಎಸಗಲು ಸಹಕರಿಸಿದ್ದಾಳೆ‌.

ವಿಚಾರ ತಿಳಿದು ಮಂಗಳೂರು ಮಹಿಳಾ ಠಾಣೆಗೆ ಸಂತ್ರಸ್ತ ಬಾಲಕಿ ತಾಯಿ ದೂರು ನೀಡಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂಬೈಗೆ ಪರಾರಿಯಾಗಲೆತ್ನಿಸುತ್ತಿದ್ದ ಆರೋಪಿ ಅಬ್ದುಲ್ ಹಮೀದ್ ನನ್ನು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಸಹಕರಿಸಿರುವ ಶಮೀನಾ ಬಾನುವನ್ನು ಬಂಧಿಸಿದ್ದಾರೆ. ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 15ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Ads on article

Advertise in articles 1

advertising articles 2

Advertise under the article