ಅರೆಬರೆ ಉಡುಗೆ ತೊಟ್ಟು ಹುಚ್ಚೆದ್ದು ಕುಣಿದ ಅಮಲಾ ಪೌಲ್: ವೀಡಿಯೋ ನೋಡಿ ತೆಗಳಿದ ಫ್ಯಾನ್ಸ್


ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್​ ಯಾರೆಂದು ಕನ್ನಡಿಗರಿಗೆ ಗೊತ್ತಿರದೆ ಇರಲಿಕ್ಕಿಲ್ಲ. ನಟ ಕಿಚ್ಚ ಸುದೀಪ್​ ಅಭಿನಯದ ಸೂಪರ್​ ಹಿಟ್​ ಸಿನಿಮಾ ಹೆಬ್ಬುಲಿ ನೋಡಿದವರಿಗೆ ಅಮಲಾ ಪೌಲ್​ ಪರಿಚಯ ಇದ್ದೇ ಇರುತ್ತದೆ. ಕೇರಳ ಮೂಲದ ಅಮಲಾ, ನೀಲತಾಮರನ್​ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗ ಪದಾರ್ಪಣೆ ಮಾಡಿದರು. ಆದರೆ, ಕಾಲಿವುಡ್​ನ “ಮೈನಾ” ಸಿನಿಮಾ ಬಳಿಕ ಅಮಲಾ ಅದೃಷ್ಟವೇ ಬದಲಾಯಿತು. ವಿಜಯ್​, ವಿಕ್ರಮ್​, ಸೂರ್ಯ, ಆರ್ಯ, ಜಯಂ ರವಿ, ಧನುಷ್​ ಸೇರಿದಂತೆ ಕಾಲಿವುಡ್​ ಸೂಪರ್​ಸ್ಟಾರ್​ಗಳೊಂದಿಗೆ ಅವರು ನಟಿಸಿದ್ದಾರೆ.

ಸಿನಿಮಾವಲ್ಲದೆ, ವೈಯಕ್ತಿಕ ವಿಚಾರ, ವಿವಾದಗಳಿಂದಲೂ ಅಮಲಾ ಪೌಲ್​ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ನೈಟ್​ ಪಾರ್ಟಿಯೊಂದರಲ್ಲಿ ಅಮಲಾ ಪೌಲ್​ ಮೈಚಳಿ ಬಿಟ್ಟು ಕುಣಿದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿದ ಅಭಿಮಾನಿಗಳು ಹುಬ್ಬೇರಿಸಿದ್ದಾರೆ.



ಜೈಲರ್​ ಸಿನಿಮಾದ ಕಾವಾಲಯ್ಯ ಹಾಡಿಗೆ ಗೆಳತಿಯ ಬರ್ತಡೇ ಸಂಭ್ರಮದ ವೇಳೆ ಅಮಲಾ ಹುಚ್ಚೆದ್ದು ಕುಣಿದಿದ್ದಾರೆ. ಈ ವೀಡಿಯೋವನ್ನು ಅವರು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಆತ್ಮ ಸಂಗಾತಿ, ನನ್ನ ತುಮ್ಮಿನ್‌ಗೆ ಜನ್ಮದಿನದ ಶುಭಾಶಯಗಳು! ನನ್ನ ಪ್ರೀತಿಯ ಬೆಸ್ಟೀ, ಪವಾಡಗಳು ಸಂಭವಿಸುತ್ತವೆ ಎಂಬುದಕ್ಕೆ ನೀನು ನನ್ನ ಜೀವಂತ ಸಾಕ್ಷಿ. ನನ್ನ ಜೀವನದಲ್ಲಿ ನಿನ್ನ ಇರುವಿಕೆ ನನಗೆ ಅಂತ್ಯವಿಲ್ಲದ ಸಂತೋಷ ಭಾವನೆಯನ್ನು ತಂದಿದೆ. ನಿನಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಅಮಲಾ ಬರೆದುಕೊಂಡಿದ್ದಾರೆ.

ಎರಡು ದಿನಗಳ ಹಿಂದೆ ಹಂಚಿಕೊಂಡಿರುವ ವೀಡಿಯೋವನ್ನು ಈವರೆಗೂ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಸಾವಿರಾರು ಮಂದಿ ಕಾಮೆಂಟ್​ ಮೂಲಕ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದಾರೆ.


ಆದರೆ, ಅಮಲಾ ಶೇರ್​ ಮಾಡಿಕೊಂಡಿರುವ ವಿಡಿಯೋಗೆ ಮೆಚ್ಚುಗೆಗಿಂತ ತೆಗಳಿಕೆ ಕಾಮೆಂಟ್​ಗಳೇ​ ಹೆಚ್ಚಾಗಿ ಬಂದಿವೆ. ಅಭಿಮಾನಿಗಳು ಅಮಲಾ ಅವರನ್ನು ಟೀಕಿಸಿದ್ದಾರೆ. ಅರೆಬರೆ ಡ್ರೆಸ್​ ಧರಿಸಿ ವಿಚಿತ್ರವಾಗಿ ಕುಣಿದಿರುವುದಕ್ಕೆ ಕಾಮೆಂಟ್​ ಮೂಲಕ ಹರಿಹಾಯ್ದಿದ್ದಾರೆ. ಈ ವಿಡಿಯೋ ನೋಡಲು ತುಂಬಾ ಅಶ್ಲೀಲವಾಗಿದೆ ಎಂದಿದ್ದಾರೆ.