-->
1000938341
ಬಂಟ್ವಾಳ: 23ವರ್ಷದ ಯುವತಿ ಮಲಗಿದ್ದಲ್ಲೇ ಮೃತ್ಯು

ಬಂಟ್ವಾಳ: 23ವರ್ಷದ ಯುವತಿ ಮಲಗಿದ್ದಲ್ಲೇ ಮೃತ್ಯು

ಬಂಟ್ವಾಳ: ಮಲಗಿದ್ದಲ್ಲೇ ಯುವತಿಯೊಬ್ಬಳು ಮೃತಪಟ್ಟ ಘಟನೆ ವಗ್ಗ ಸಮೀಪದ ಮಧ್ವ ಎಂಬಲ್ಲಿ ನಡೆದಿದೆ.

ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ಮಿತ್ರಾ ಶೆಟ್ಟಿ (23) ಮೃತಪಟ್ಟ ಯುವತಿ.

ಮಿತ್ರಾ ಶೆಟ್ಟಿಯ ತಂದೆ ಹಾಗೂ ಸಹೋದರ ಇಬ್ಬರೂ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಆದ್ದರಿಂದ ಮನೆಯಲ್ಲಿ ಮಿತ್ರಾ ಶೆಟ್ಟಿ ಮತ್ತು ಆಕೆಯ ತಾಯಿ ಕಾವಳಪಡೂರು ಗ್ರಾಮದ ಮಧ್ವ ಕಂಬಲಡ್ಕದ ದೊಡ್ಡಮ್ಮನ ಮನೆಯಲ್ಲಿ ವಾಸವಿದ್ದರು. ಮಂಗಳವಾರ ರಾತ್ರಿ ಊಟ ಮಾಡಿ ಮಲಗಿದ್ದ ಮಿತ್ರಾ ಶೆಟ್ಟಿ ಬೆಳಗ್ಗೆ ಏಳದೇ ಇದ್ದು, ಮಾತನಾಡದಿದ್ದಾಗ ಮನೆಯವರು ಗಾಬರಿಯಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದಾರೆ. ಈ ವೇಳೆ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಬಳಿಕ ಮೃತದೇಹವನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಆದರೆ ಬ್ರೆನ್ ಎಮರೇಜ್ ನಿಂದಲೂ ಸಾವು ಆಗಿರಬಹುದು ಎಂಬ ಸಂಶಯವಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದ ಬಳಿಕ ಸಾವಿನ ಸ್ಪಷ್ಟವಾದ ಕಾರಣ ಸಿಗಬಹುದು. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article