ವಿಮಾನದಲ್ಲಿ 14 ವರ್ಷದ ಬಾಲಕಿಯ ಮುಂದೆ ಹಸ್ತಮೈಥುನ- ಎಫ್‌ಬಿಐ ಬಲೆಗೆ ಭಾರತೀಯ ವೈದ್ಯ


ಬಾಸ್ಟನ್: ವಿಮಾನ ಪ್ರಯಾಣದ ವೇಳೆ 14 ವರ್ಷದ ಬಾಲಕಿಯ ಮುಂದೆ ಹಸ್ತಮೈಥುನ ಮಾಡಿಕೊಂಡ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯರೊಬ್ಬರನ್ನು ಅಮೆರಿಕದ ತನಿಖಾ ಸಂಸ್ಥೆ FBI ಬಂಧಿಸಿದೆ. 

ಎಫ್‌ಬಿಐನ ಬಾಸ್ಟನ್ ವಿಭಾಗದ ಖಾತೆಯಿಂದ ಬಂಧನದ ಮಾಹಿತಿಯನ್ನು ಟ್ವೀಟ್ ಮಾಡಲಾಗಿದೆ. ಕಳೆದ ವರ್ಷ ಹೊನೊಲುಲುನಿಂದ ಬೋಸ್ಟನ್‌ಗೆ ವಿಮಾನಯಾನದ ವೇಳೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿತ್ತು.

 ಬೋಸ್ಟನ್‌ನ ಸ್ಥಳೀಯ ಕೋರ್ಟ್‌ಗೆ ಹಾಜರಾದ ಬಳಿಕ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ. ಆರೋಪ ಸಾಬೀತಾದರೆ ತಪ್ಪಿತಸ್ಥನಿಗೆ 90 ದಿನಗಳ ಜೈಲು ಮತ್ತು 5 ಸಾವಿರ ಡಾಲರ್‌ವರೆಗೆ ದಂಡದ ಶಿಕ್ಷೆ ವಿಧಿಸಲು ಅವಕಾಶವಿದೆ. ಆರೋಪಿಯನ್ನು 33 ವರ್ಷದ ಡಾ. ಸುದೀಪ್ತಾ ಮೊಹಂತಿ ಎಂದು ಗುರುತಿಸಲಾಗಿದ್ದು, ಈತ ಕೇಂಬ್ರಿಜ್‌ನ ನಿವಾಸಿ ಎಂದು ತಿಳಿದುಬಂದಿದೆ. ಅಸಭ್ಯ ವರ್ತನೆಯ ಬಗ್ಗೆ ಬಾಲಕಿಯ ದೂರಿನ ಬಳಿಕ ಪ್ರಕರಣ ದಾಖಲಾಗಿತ್ತು.