11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 3049 ಹುದ್ದೆಗಳು: ಅರ್ಜಿ ಸಲ್ಲಿಸಲು ವಿವರ ಇಲ್ಲಿದೆ...

11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 3049 ಹುದ್ದೆಗಳು: ಅರ್ಜಿ ಸಲ್ಲಿಸಲು ವಿವರ ಇಲ್ಲಿದೆ...





ದೇಶದ ಪ್ರತಿಷ್ಠಿತ 11 ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 3049 ಪ್ರೊಬೇಷನರಿ ಅಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಳೆದ ಜುಲೈ ತಿಂಗಳಲ್ಲಿ ಸುಮಾರು 4000 ಹುದ್ದೆಗಳಿಗೆ ಬ್ಯಾಂಕ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ ಅರ್ಜಿ ಆಹ್ವಾನಿಸಿತ್ತು.


ಇದೀಗ ಮತ್ತೆ 3049 ಪ್ರೊಬೇಷನರಿ ಅಫೀಸರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


ಈ ಅರ್ಜಿ ಸಲ್ಲಿಸಲು ವಿವರ ಇಲ್ಲಿದೆ...


ಆಗಸ್ಟ್ 1 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನವಾಗಿರುತ್ತದೆ.


ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.


ವಯೋಮಿತಿ: ಕನಿಷ್ಟ 20 ವರ್ಷಗಳು ಹಾಗೂ ಗರಿಷ್ಟ 30 ವರ್ಷಗಳು


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

www.ibps.in

https://www.ibps.in/