ಖಾಕಿ ಜೊತೆ ವಾಗ್ವಾದಕ್ಕಿಳಿದ ತೃತೀಯ ಲಿಂಗಿಗಳು ಅರೆಸ್ಟ್: ಶಾಂತಿ ಭಂಗ ಮಾಡಿದ್ದ ಮಂಗಳಮುಖಿಯರಿಗೆ ನ್ಯಾಯಾಂಗ ಬಂಧನ!

ಖಾಕಿ ಜೊತೆ ವಾಗ್ವಾದಕ್ಕಿಳಿದ ತೃತೀಯ ಲಿಂಗಿಗಳು ಅರೆಸ್ಟ್: ಶಾಂತಿ ಭಂಗ ಮಾಡಿದ್ದ ಮಂಗಳಮುಖಿಯರಿಗೆ ನ್ಯಾಯಾಂಗ ಬಂಧನ!




ಸಾರ್ವಜನಿಕ ಸ್ಥಳದಲ್ಲೇ ಖುಲ್ಲಂಖುಲ್ಲಾ ವೇಶ್ಯಾವಾಟಿಕೆಗೆ ಇಳಿದಿದ್ದ ಮಂಗಳಮುಖಿಯರಿಗೆ ಮಂಗಳೂರು ಪೊಲೀಸರು ಸರಿಯಾಗಿ ಮಂಗಳಾರತಿ ಮಾಡಿದ್ದಾರೆ. 


ರಾತ್ರಿಯಾಗುತ್ತಿದ್ದಂತೆಯೇ ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಅಂಗಾಂಗ ಪ್ರದರ್ಶನ ಮಾಡುತ್ತಾ ಅಸಭ್ಯವಾಗಿ ವರ್ತಿಸಿ 'ಕಾಮಕೇಳಿ' ಆಹ್ವಾನಿಸುತ್ತಿದ್ದ ಕಾಮುಕ ಮಂಗಳಮುಖಿಯರನ್ನು ಪೊಲೀಸರು ಬಂಧಿಸಿದ್ದಾರೆ.



ಮಂಗಳೂರಿನ ಉರ್ವ ಪೊಲೀಸ್ ಠಾಣೆಯ ಅಧಿಕಾರಿಗಳು 13 ಮಂದಿ ಕಾಮುಕರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಂಧಿತ ಮಂಗಳಮುಖಿಯವರಿಗೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿದೆ.



ಶನಿವಾರ ರಾತ್ರಿ ಮಂಗಳೂರಿನ ಕುಂಟಿಕಾನ ಜಂಕ್ಷನ್‌ನಲ್ಲಿ 13 ಮಂದಿ ಮಂಗಳಮುಖಿಯರ ಗುಂಪು ಅಶ್ಲೀಲ ವಸ್ತ್ರ ಧರಿಸಿ ಅಂಗಾಂಗ ಪ್ರದರ್ಶನ ಮಾಡುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೆ ತೊಂದರೆ ನೀಡಿ, ಬಹಿರಂಗವಾಗಿ 'ಕಾಮಕೇಳಿ'ಗೆ ಆಹ್ವಾನಿಸುತ್ತಿದ್ದರು.



ಈ ಬಗ್ಗೆ ಮಧ್ಯಪ್ರವೇಶ ಮಾಡಿ ಕಾನೂನು ರಕ್ಷಣೆಗೆ ಮುಂದಾದ ಖಾಕಿ ಸಿಬ್ಬಂದಿ ಜೊತೆ ತೃತೀಯ ಲಿಂಗಿಗಳು ಸಾರ್ವಜನಿಕವಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆಸಿದ್ದರು.



ಸಭ್ಯ ನಾಗರಿಕ ಸಮಾಜದಲ್ಲಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಾ ಹೀಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವ ಮಂಗಳಮುಖಿಯರನ್ನು ಬಂಧಿಸುವ ಮೂಲಕ ಪೊಲೀಸರು ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಿದ್ದಾರೆ.


ಅನೈತಿಕ ಚಟುವಟಿಕೆ ತಡೆಯುವಲ್ಲಿ ಮಹಿಳಾ ಸಿಬ್ಬಂದಿ ಸಹಿತ ಪೊಲೀಸರು ವಹಿಸಿದ ಶ್ರಮಕ್ಕೆ ಪೊಲೀಸರು ವ್ಯಾಪಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.