-->
1000938341
Sulya:-ನದಿ ನೀರಿಗೆ ಬಿದ್ದು ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ.

Sulya:-ನದಿ ನೀರಿಗೆ ಬಿದ್ದು ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ.

ಸುಳ್ಯ

ಸುಳ್ಯ ತಾಲೂಕಿನ ಆಲೆಟ್ಟಿ ಕೂರ್ನಡ್ಕದಲ್ಲಿ ಅಡಿಕೆ ಮರದ ಕಿರು ಸೇತುವೆ ದಾಟುತ್ತಿದ್ದ ಸಂದರ್ಭದಲ್ಲಿ ನೀರಿಗೆ ಬಿದ್ದು ನಾಪತ್ತೆಯಾದ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.

ಸುಳ್ಯಕ್ಕೆ ತೋಟದ ಕೆಲಸಕ್ಕೆಂದು ಬಂದ ಕಾಸರಗೋಡು ಚಿಟ್ಟಾರಿಕ್ಕಲ್ ನಿವಾಸಿ ನಾರಾಯಣ (45) ಎಂಬವರು ಸುಳ್ಯದ ಆಲೆಟ್ಟಿ ಗ್ರಾಮದ ಹೊನ್ನೇದಿ ಎಂಬಲ್ಲಿ ಜುಲೈ 6ರಂದು ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ನದಿ ದಾಟುತ್ತಿದ್ದಾಗ ಕಿರುಸೇತುವೆಯಿಂದ ನದಿಗೆ ಬಿದ್ದು ಕಣ್ಣರೆಯಾಗಿದ್ದರು.
ಇದೀಗ ನಾಲ್ಕನೇ ದಿನವೂ ರಕ್ಷಣಾ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿರುವ ಸಮಯದಲ್ಲಿ ನದಿಗೆ ನಾರಾಯಣ ಅವರು ಬಿದ್ದ ಸ್ಥಳದಿಂದ ಸುಮಾರು ನಾಲ್ಕು ಕಿ.ಮೀ ಕೆಳಗಡೆ ಮೃತದೇಹ ಪತ್ತೆಯಾಗಿದೆ.

Ads on article

Advertise in articles 1

advertising articles 2

Advertise under the article