ಏಕಕಾಲದಲ್ಲಿ ಇಬ್ಬರು ಯುವಕರನ್ನು ವಿವಾಹವಾಗುವೆನೆಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿದ ಯುವತಿಗೆ ಶಾಕ್


ಕೊಲ್ಲಂ: ಇಲ್ಲಿನ ಪಠಾಣಪುರಂ ಮೂಲದ ಯುವತಿಯೊಬ್ಬಳು ಏಕಕಾಲದಲ್ಲಿ ಇಬ್ಬರು ಯುವಕರನ್ನು ವಿವಾಹವಾಗುವೆನೆಂದು ಪಠಾಣಪುರಂ ಮತ್ತು ಪುನಲೂರಿನ ಸಬ್​ ರಿಜಿಸ್ಟ್ರಾರ್​ ಕಚೇರಿಗಳಿಗೆ ಎರಡು ಪ್ರತ್ಯೇಕ ಅರ್ಜಿ ದಾಖಲಿಸಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಈಕೆಯ ಅರ್ಜಿಯನ್ನು ನೋಡಿ ಕಚೇರಿ ಸಿಬ್ಬಂದಿ ಗೊಂದಲಕ್ಕೀಡಾಗಿದ್ದಾರೆ. ಆದರೆ ಎರಡು ವಾರಗಳ ಅಂತರದಲ್ಲಿ ಯುವತಿ ತನ್ನ ಮನಸ್ಸು ಬದಲಾಯಿಸಿ ಹಳೆಯ ಬಾಯ್​ಫ್ರೆಂಡ್​ ಅನ್ನೇ ಆಯ್ದುಕೊಂಡಿದ್ದಾಳೆ. ಆದರೂ ಸಲ್ಲಿಕೆಯಾಗಿರುವ ಎರಡೂ ಅರ್ಜಿಗಳ ಸಂಬಂಧ ಯುವತಿ ಮತ್ತು ಇಬ್ಬರೂ ಯುವಕರನ್ನು ವಿಚಾರಣೆಗೆ ಕರೆಯುವ ಮೂಲಕ ಯುವತಿಗೆ ಸಬ್​ ರಿಜಿಸ್ಟ್ರಾರ್​ ಕಚೇರಿ ಶಾಕ್​ ನೀಡಿದೆ.

ಅರ್ಜಿ ಸಲ್ಲಿಸಿದ ಯುವತಿ ಪಠಾಣಪುರಂನಲ್ಲಿ ಲ್ಯಾಬ್​ ಟೆಕ್ನಿಶಿಯನ್​ ಆಗಿದ್ದಾಳೆ. ಈಕೆ ಪುನ್ನಲಾ ಮೂಲದ ಯುವಕನನ್ನು ವಿವಾಹವಾಗುವೆನೆಂದು ಜೂನ್​ 30ರಂದು ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಳು. ಆದರೆ ಜುಲೈ 13ರಂದು ಇದೇ ಯುವತಿ ಮತ್ತೆ ಪುನಲೂರು ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಮತ್ತೊಂದು ಅರ್ಜಿ ಸಲ್ಲಿಸಿದ್ದು, ಪುನಲೂರು ಮೂಲದ ಯುವಕನನ್ನು ಮದುವೆ ಆಗುವುದಾಗಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾಳೆ.

ಯುವತಿ ಮೂಲತಃ ಪಠಾಣಪುರಂ ಮೂಲದವಳು. ಆದ್ದರಿಂದ ಪುನಲೂರು ಸಬ್​ ರಿಜಿಸ್ಟ್ರಾರ್​ ಕಚೇರಿ ಅರ್ಜಿಯ ಸಂಬಂಧ ನೋಟಿಫಿಕೇಶನ್​ ಅನ್ನು ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಕಳುಹಿಸಲಾಗಿದೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಆದ್ದರಿಂದ ಜು.13 ಪುನಲೂರು ಮೂಲದ ಯುವಕನೊಂದಿಗೆ ತೆರಳಿ ತನ್ನ ಹೇಳಿಕೆ ದಾಖಲಿಸಿದ್ದಾಳೆ.

ಯುವತಿಯ ಪ್ರಕಾರ ಆಕೆ ಪುನಲೂರು ಮೂಲದ ಯುವಕನೊಂದಿಗೆ ಲಿವಿಂಗ್​ ರಿಲೇಷನ್ ಶಿಪ್ ​ನಲ್ಲಿದ್ದಳು. ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದೆ. ಹಿನ್ನೆಲೆಯಲ್ಲಿ ತವರಿನಲ್ಲಿ ಉಳಿದುಕೊಂಡಿದ್ದಳು. ಇದೇ ಸಂದರ್ಭ ಆಕೆಗೆ ಪಠಾಣಪುರಂ ಮೂಲದ ಯುವಕನ ಪರಿಚಯವಾಗಿತ್ತು. ಆಕೆ ಹೇಳುವ ಪ್ರಕಾರ ಆತ ನನಗೆ ಗೊತ್ತಿಲ್ಲದೆ ಅರ್ಜಿಗೆ ಸಹಿ ಹಾಕಿಸಿಕೊಂಡಿದ್ದಾನೆ. ಆದರೆ, ಅದು ಮದುವೆಗೆ ಸಂಬಂಧಿಸಿದ ಅರ್ಜಿ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾಳೆ.

ಆದರೆ, ಪಠಾಣಪುರಂ ಸಬ್​ ರಿಜಿಸ್ಟ್ರಾರ್​ ಕಚೇರಿಯು ಆಕೆಯ ಒಂದು ಬದಿಯ ಕತೆಯನ್ನು ನಂಬಲು ತಯಾರಿಲ್ಲ. ಏನೋ ಮುಚ್ಚಿಡುತ್ತಿದ್ದಾಳೆ ಎಂಬ ಸಂದೇಹ ಬಂದಿದ್ದು, ಜುಲೈ 21ಕ್ಕೆ ಪುನ್ನಲಾ ಮೂಲದ ಯುವಕನೊಂದಿಗೆ ವಿಚಾರಣೆಗೆ ಬರುವಂತೆ ಯುವತಿಗೆ ತಾಕೀತು ಮಾಡುವ ಮೂಲಕ ಆಕೆಗೆ ಶಾಕ್​ ನೀಡಿದೆ. ಇದೇ ವೇಳೆ ಪುನಲೂರು ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ಜುಲೈ 22ರಂದು ಮಹಿಳೆಯರು ಹಾಗೂ ಪುನಲೂರು ಮೂಲದವರ ನಡುವೆ ಸಭೆಗೆ ಕರೆ ನೀಡಲಾಗಿದೆ.