ಪುತ್ತೂರಿನಲ್ಲಿ ಅನುಮತಿಯಿಲ್ಲದೆ ವಿಜಯೋತ್ಸವ- ಪುತ್ತಿಲ ಪರಿವಾರದ ವಿರುದ್ದ ಪ್ರಕರಣ

ಪುತ್ತೂರು:  ಗ್ರಾಮ ಪಂಚಾಯಿತಿ ಉಪ ಚುನಾವಣೆಯ ಫಲಿತಾಂಶ ಬಂದ ಬಳಿಕ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯದೆ  ವಿಜಯೋತ್ಸವ ಮೆರವಣಿಗೆ ನಡೆಸಿದ ಕಾರಣಕ್ಕೆ ಪುತ್ತಿಲ ಪರಿವಾರದ ವಿರುದ್ಧ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ.

ನ್ಯಾಯಾಲಯದ ಅನುಮತಿ ಮೇರೆಗೆ ಮೆರವಣಿಗೆ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಆರ್ಯಾಪು ಗ್ರಾಪಂ ವಾರ್ಡ್ ಎರಡರ ಚುನಾವಣೆಯ ಮತ ಎಣಿಕೆ ಬುಧವಾರ ನಡೆದು, ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ ಅವರು ವಿಜೇತರಾಗಿದ್ದರು. ಆ  ಬಳಿಕ ಪರಿವಾರದ ಕಾರ್ಯಕರ್ತರು ತಾಲೂಕು ಆಡಳಿತ ಸೌಧದಿಂದ ಪುತ್ತಿಲ ಪರಿವಾರ ಕಚೇರಿಯವರೆಗೆ ಮುಖ್ಯರಸ್ತೆಯಲ್ಲಿ ಮೆರವಣಿಗೆಯನ್ನು ಮಾಡಿದ್ದರು.

ಇದಕ್ಕೆ ಪೊಲೀಸ್ ಇಲಾಖೆಯ ಪೂರ್ವನುಮತಿ ಪಡೆಯದೇ ಇರುವ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುವ ಸಂಬಂಧ ನ್ಯಾಯಾಲಯದ ಅನುಮತಿಯನ್ನು ಕೇಳಿತ್ತು. ಕೋರ್ಟ್ ಅನುಮತಿ ನೀಡಿದ್ದು ಅದರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಳ್ಳಲಾಗಿದೆ.