ಆನ್‌ಲೈನ್ ಜೂಜು: ಉದ್ಯಮಿ ಕಳೆದುಕೊಂಡ ಹಣ ಎಷ್ಟು ಗೊತ್ತೇ..?

ಆನ್‌ಲೈನ್ ಜೂಜು: ಉದ್ಯಮಿ ಕಳೆದುಕೊಂಡ ಹಣ ಎಷ್ಟು ಗೊತ್ತೇ..?





ಆನ್‌ಲೈನ್ ಜೂಜು ಎಂಬ ಆಮಿಷದ ಸ್ಪರ್ಧೆಗೆ ಭಾರೀ ಹಣ ಹೂಡಿದ ಉದ್ಯಮಿಯೊಬ್ಬರು ತಮ್ಮೆಲ್ಲ ಆಸ್ತಿಯನ್ನು ಅದರಲ್ಲಿ ಕಳೆದುಕೊಂಡಿದ್ದಾರೆ.



ನಾಗಪುರ ಮೂಲದ ಉದ್ಯಮಿಯೊಬ್ಬರು ಆನ್‌ಲೈನ್ ಜೂಜು ಮೂಲಕ ರೂ. 58 ಕೋಟಿಗಳನ್ನು ಕಳೆದುಕೊಂಡಿದ್ದಾರೆ.



ಪ್ರಕರಣಕ್ಕೆ ಸಂಬಂಧಿಸಿದಂತೆ ಬುಕ್ಕಿ ಅನಂತ್ ಆಲಿಯಾಸ್ ಸಂತು ನವರತ್ನ ಜೈನ್ ಎಂಬವನ ಮನೆ ಮೇಲೆ ದಾಳಿ ನಡೆಸಿ 14 ಕೋಟಿ ರೂ. ನಗದು, ನಾಲ್ಕು ಕಿಲೋ ಗ್ರಾಂ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಅನಂತು ದುಬೈಗೆ ಹಾರಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಘಟನೆ ಹಿನ್ನೆಲೆ:

ಆನ್‌ಲೈನ್‌ ಜೂಜಿನಲ್ಲಿ ಭಾರೀ ಹಣ ಗಳಿಸಬಹುದು ಎಂದು ಆರೋಪಿ ಜೈನ್ ಉದ್ಯಮಿಗೆ ಆಮಿಷವೊಡ್ಡಿದ್ದರು. ಆರಂಭದಲ್ಲಿ ಜೂಜಿನಲ್ಲಿ ಬಾಗವಹಿಸಲು ಉದ್ಯಮಿ ನಿರಾಕರಿಸಿದ್ದರು. ಆದರೆ, ವಿಪರೀತ ಮನವೊಲಿಕೆಯ ಪರಿಣಾಮವಾಗಿ ಎಂಟು ಲಕ್ಷ ರೂ.ಗಳನ್ನು ತೊಡಗಿಸಿಕೊಳ್ಳಲು ಉದ್ಯಮಿ ಆರೋಪಿಗೆ ನಗದು ರವಾನಿಸಿದ್ದರು.


ಆರೋಪಿಯ ಸೂಚನೆಯಂತೆ ಆನ್‌ಲೈನ್ ಜೂಜಿನಲ್ಲಿ ಖಾತೆ ತೆರೆದಾಗ ಅದರಲ್ಲಿ ಎಂಟು ಲಕ್ಷ ರೂ.ಗಳನ್ನು ಕಂಡು ಉದ್ಯಮಿಗೆ ಖುಷಿಯಾಯಿತು. ನಂತರ ಹಂತ ಹಂತವಾಗಿ ಹಣ ಕಳೆದುಕೊಂಡ ಉದ್ಯಮಿ ಅಂತಿಮವಾಗಿ 58 ಕೋಟಿ ರೂ.ಗಳನ್ನು ಕಳೆದುಕೊಂಡು ನಷ್ಟ ಅನುಭವಿಸಿದರು.


ಆಟದ ಬಗ್ಗೆ ಅನುಮಾನಗೊಂಡ ಉದ್ಯಮಿ, ಹಣ ಮರಳಿಸುವಂತೆ ಜೈನ್‌ಗೆ ತಿಳಿಸಿದ್ದರು. ಹಣ ಕೊಡಲು ನಿರಾಕರಿಸಿದ ಜೈನ್ ವಿರುದ್ಧ ಉದ್ಯಮಿ ಪೊಲೀಸರಿಗೆ ದೂರು ಸಲ್ಲಿಸಿದರು.