ಬಂಟ್ವಾಳದಲ್ಲಿ ಪೊಲೀಸ್ ಮೇಲೆ ನೈತಿಕ ಪೊಲೀಸ್ ಗಿರಿ- ಕುಡಿದ ಮತ್ತಿನಲ್ಲಿ ನೈತಿಕ ಪೊಲೀಸರಾದವರು ಜೈಲು ಸೇರಿದರು!



ಮಂಗಳೂರು: ಬಂಟ್ವಾಳದಲ್ಲಿ ಪೊಲೀಸ್ ಸಿಬ್ಬಂದಿ ಮೇಲೆ ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಜುಲೈ 27 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಬಿಸಿ ರೋಡಿನಿಂದ ಪೊಲೀಸ್ ವಸತಿ  ಗೃಹಕ್ಕೆ ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿ ಕುಮಾರ್ ಮತ್ತು ಅವರ ಪತ್ನಿ ಮತ್ತು ಸಂಬಂಧಿಯವರನ್ನು ಹಿಂಬಾಲಿಸಿಕೊಂಡು ಹೋಗಿ ಪೊಲೀಸ್ ವಸತಿಗೃಹದ ಪರಿಸರದಲ್ಲಿ ನೈತಿಕ ಪೊಲೀಸ್ ಗಿರಿ‌ ನಡೆಸಲಾಗಿದೆ.

 ಕುಮಾರ್  ತನ್ನ ಮನೆಯವರನ್ನು ವಸತಿಗೃಹಕ್ಕೆ ಕಳುಹಿಸಿ ಕರ್ತವ್ಯದ ಮೇರೆಗೆ ವಾಪಸ್ ಬರುತ್ತಿದ್ದಾಗ  ಮನೀಶ್ ಮತ್ತು ಮಂಜುನಾಥ್ ಎಂಬ ಇಬ್ಬರು ವ್ಯಕ್ತಿಗಳು ಸಿಬ್ಬಂದಿ ಕುಮಾರ್ ಅವರನ್ನು ಅಡ್ಡಗಟ್ಟಿ ನೀನಗೆ ಯುವತಿಯರೊಂದಿಗೆ ಏನು ಕೆಲಸ ಎಂದು ಅವಾಚ್ಯ ಶಬ್ದಗಳಿಂದ  ಬೈದಿದ್ದಾರೆ.  ಕುಮಾರ್ ರವರು ನಾನು ಬಿ.ಸಿ. ರೋಡಿನ ಪೊಲೀಸ್ ಮತ್ತು ನನ್ನ ಜೊತೆಯಲ್ಲಿದ್ದವರು  ನನ್ನ ಪತ್ನಿ ಮತ್ತು ನಾದಿನಿ ಎಂದು ಹೇಳಿದರೂ  ಕೇಳದೆ, ನೀನು ಪೊಲೀಸ್ ಅಲ್ಲ,   ಅವಳು ನಿನ್ನ ಪತ್ನಿಯೂ ಅಲ್ಲ ಎಂದು ಹೇಳಿ, ಇದನ್ನು ನೋಡಿ ಅಲ್ಲಿಗೆ  ಬಂದ ಕುಮಾರ್ ಅವರ ಪತ್ನಿ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ.
 
ಸರಕಾರಿ ಕರ್ತವ್ಯದ ಮೇಲೆ ಹೋಗುತ್ತಿದ್ದಾಗ  ಅಡ್ಡಿ ಪಡಿಸಿದ ಇಬ್ಬರೂ ಆರೋಪಿಗಳ ಮೇಲೆ ಐ ಪಿ ಸಿ ಕಲಂ 341,504,0354(D),354(A), r)w 34 ರಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.