ಮಂಗಳೂರು- ಡ್ರೈನೆಜ್ ಫಿಟ್ ನಲ್ಲಿ ನಾಪತ್ತೆಯಾದ ಮಹಿಳೆ ಶವ ಪತ್ತೆ


ಮೂಲ್ಕಿ: ಇಲ್ಲಿನ ಪಡುಪಣಂಬೂರು ಬಳಿಯ ಮನೆಯೊಂದರ ಹಿಂದುಗಡೆ ಇರುವ ಡ್ರೈನೇಜ್‌ ಪಿಟ್‌ನಲ್ಲಿ ಮಹಿಳೆಯ ಶವ ಬುಧವಾರ ಪತ್ತೆಯಾಗಿದೆ. 

ಪುಷ್ಪರಾಜ್ ಅಮೀನ್ ಎಂಬವರ ಮನೆಯ ಹಿಂದುಗಡೆ ಇರುವ ಡ್ರೈನೇಜ್ ಪಿಟ್‌ನಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಸ್ಥಳೀಯ ಕಲ್ಲಾಪು ನಿವಾಸಿ ನಾಗಮ್ಮ ಶೆಟ್ಟಿಗಾರ್ (85) ಎಂದು ಗುರುತಿಸಲಾಗಿದೆ.

ಕೆಲವು ತಿಂಗಳ ಹಿಂದೆ ನಾಗಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. 

ಮನೆಯ ಮಾಲೀಕರು ಮುಂಬೈಯಲ್ಲಿದ್ದು ಬಂದು ಹೋಗುತ್ತಿದ್ದರು. ಮನೆಯ ಹಿಂದಿನಿಂದ ವಿಪರೀತ ವಾಸನೆ ಬರುತ್ತಿರುವ ಬಗ್ಗೆ ಸ್ಥಳೀಯರು ದೂರಿದಾಗ ಸಂಶಯಗೊಂಡ ಅವರು, ಪೊಲೀಸರ ಮೂಲಕ ಪರಿಶೀಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.