ರೈಲ್ವೇಯಲ್ಲಿ ಉದ್ಯೋಗ: ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ 904 ಹುದ್ದೆಗಳು!

ರೈಲ್ವೇಯಲ್ಲಿ ಉದ್ಯೋಗ: ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ 904 ಹುದ್ದೆಗಳು!





ನೈರುತ್ಯ ರೈಲ್ವೇ ಇಲಾಖೆಯಲ್ಲಿ 904 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಲ್ಲಿ ಈ ಹುದ್ದೆಗಳು ಭರ್ತಿ ಮಾಡಲಾಗುವುದು.



ಒಂದು ವರ್ಷದ ಗುತ್ತಿಗೆ ಅವಧಿಗೆ ಈ ಹುದ್ದೆ ನೇಮಕಾತಿ ನಡೆಯಲಿದೆ. ಆಸಕ್ತಿ ಇರುವ ಐಟಿಐ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.



ಹುದ್ದೆಯ ವಿವರ: ಮೂರು ವಿಭಾಗಗಳಲ್ಲಿ ಫೀಟ್ಟರ್, ವೆಲ್ಡರ್, ಮೆಕಾನಿಸ್ಟ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಪೈಂಟರ್, ಸ್ಟೆನೋಗ್ರಾಫರ್, ಪ್ರೋಗ್ರಾಮಿಂಗ್ ಅಂಡ್ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಅಸಿಸ್ಟಂಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.



ಹುಬ್ಬಳ್ಳಿಯಲ್ಲಿ 237, ಹುಬ್ಬಳ್ಳಿಯ ಕ್ಯಾರೇಜ್ ರಿಪೇರಿ ವರ್ಕ್‌ಶಾಪ್‌ನಲ್ಲಿ 217, ಬೆಂಗಳೂರು ವಿಭಾಗದಲ್ಲಿ 230, ಮೈಸೂರು ವಿಭಾಗದಲ್ಲಿ 177, ಮೈಸೂರು ಸೆಂಟ್ರಲ್ ವರ್ಕ್‌ಶಾಪ್‌ನಲ್ಲಿ 43 ಹುದ್ದೆಗಳು ಭರ್ತಿಯಾಗಲಿವೆ.



ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-08-2023

ಹೆಚ್ಚಿನ ಮಾಹಿತಿಗೆ swr.indianrailways.gov.in ಜಾಲತಾಣಕ್ಕೆ ಭೇಟಿ ನೀಡಬಹುದು.