ಮಣಿಪುರದ ನೊಂದ ಕುಟುಂಬಗಳಿಗೆ ಆಳ್ವಾಸ್‌ನಿಂದ ನೆರವಿನ ಹಸ್ತ
ಮಣಿಪುರ ಸಂಘರ್ಷದಲ್ಲಿ ನೊಂದ ಕುಟುಂಬಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನೆರವಿನ ಹಸ್ತ ಚಾಚಿದೆ.
ಕಾಲೇಜಿನಲ್ಲಿ ನಡೆದ ಸಾಂಪ್ರದಾಯಿಕ ದಿನಾಚರಣೆಯಲ್ಲಿ ಸಂಗ್ರಹಿಸಿದ ಸುಮಾರು ಒಂದು ಲಕ್ಷ ರೂ.ಗಳನ್ನು ವಿವಿಧ ಪರಿಹಾರ ಶಿಬಿರಗಳಿಗೆ ಮತ್ತು ರಾಜ್ಯದ ಬಿಸ್ನುಪುರ್ ಜಿಲ್ಲೆ ತೌಬಲ್ ಜಿಲ್ಲೆ, ಕಾಕ್ನಿಂಗ್ ಜಿಲ್ಲೆಯ ಹಾಲಿ ಗ್ರಾಮಗಳಿಗೆ ವಿತರಿಸಲಾಯಿತು.
ಏಳು ಪರಿಹಾರ ಶಿಬಿಗಳಿಗೆ ತಲಾ ರೂ. 10 ಸಾವಿರ, ಎರಡು ಮುಂಚೂಣಿ ಗ್ರಾಮ ರಕ್ಷಣಾ ಸಂಸ್ಥೆಗೆ ತಲಾ ರೂ. 10 ಸಾವಿರ, ಮೂರು ಸ್ಥಳಗಳಿಗೆ ಆಲೂಗಡ್ಡೆ, ಸಕ್ಕರೆ, ಅಡುಗೆ ಎಣ್ಣೆ, ಟೂತ್ ಬ್ರಷ್, ಮಸೂರ, ನೀರಿನ ಬಾಟಲಿಗಳನ್ನು ಪೂರೈಸಲಾಯಿತು.
ಮಿಜಾರಿನ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಆಳ್ವಾಸ್ ಸಾಂಪ್ರದಾಯಿಕ ದಿನಾಚರಣೆ ನಡೆಯಿತು.
ಆಳ್ವಾಸ್ ಕಾಲೇಜು ಮತ್ತು ಕಾಲೇಜಿನ ವಿದ್ಯಾರ್ಥಿಗಳಿಗೆ ಮಣಿಪುರದ ಜನತೆ ಆಭಾರಿಯಾಗಿದೆ ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತ ಅಜಂತಾ ಮೊಯಿರಾಗ್ತೆಂ ಈ ಸಂದರ್ಭದಲ್ಲಿ ತಿಳಿಸಿದರು.