ಮಂಗಳೂರಿನಲ್ಲೊಂದು ವಿಚಿತ್ರ ಪ್ರಕರಣ- ಚಪ್ಪಲಿ ಕಳೆದುಕೊಂಡಿದ್ದಕ್ಕೆ ಪೊಲೀಸ್ ದೂರು

ಮಂಗಳೂರು:  ಮಂಗಳೂರಿನಲ್ಲೊಬ್ಬ ತಾನು ಕಳೆದುಕೊಂಡ ಚಪ್ಪಲಿಗಾಗಿ ಪೊಲೀಸರನ್ನೆ ಕರೆಸಿಕೊಂಡು ಹುಡುಕಾಟ ನಡೆಸಿದ ಘಟನೆ ಆದಿತ್ಯವಾರ ನಡೆದಿದೆ.

ನಗರದ ಶರವು ದೇವಸ್ಥಾನದ ಬಳಿ ಇರುವ ಬಾಳಂಭಟ್ ಸಭಾಭವನದಲ್ಲಿ ರವಿವಾರ ಸಮಾರಂಭ ಇತ್ತು. ಈ ಸಂದರ್ಭದಲ್ಲಿ ಸಮಾರಂಭಕ್ಕೆ ಬಂದಿದ್ದ ವ್ಯಕ್ತಿಯೊಬ್ಬ ಚಪ್ಪಲಿ ಕಳೆದುಕೊಂಡಿದ್ದಾನೆ.  ವಾಪಾಸು ಹೋಗುವಾಗ ತಾನು ಇಟ್ಟ ಜಾಗದಲ್ಲಿ ಚಪ್ಪಲಿ ಇಲ್ಲದಿರುವುದರಿಂದ ಹುಡುಕಾಡಿದ ಈತ 112 ನಂಬರ್ ಗೆ ಕರೆ ಮಾಡಿದ್ದಾನೆ.

112 ಗೆ ಯಾರಾದರೂ ಕರೆ ಮಾಡಿದರೆ ನಿಗದಿತ ಸ್ಥಳದಲ್ಲಿರುವ ನಿಯೋಜಿತ 112 ವಾಹನದಲ್ಲಿ ಇರುವ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಅದರಂತೆ ಚಪ್ಪಲಿ ಕಳೆದುಹೋದ ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ಚಪ್ಪಲಿ ಸಿಗದೆ ಇರುವುದರಿಂದ ಪೊಲೀಸ್ ದೂರು ನೀಡಲು ತಿಳಿಸಿದ್ದಾರೆ.ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಚಪ್ಪಲಿ ಧರಿಸಿ ಕೊಂಡು ಹೋಗಿರುವುದು ಸೆರೆಯಾಗಿದೆ. 112 ಪೊಲೀಸರ ಸೂಚನೆಯಂತೆ ವ್ಯಕ್ತಿ ಬಂದರು ಠಾಣೆಗೆ ದೂರು‌ ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ