ಮಂಗಳೂರಿನಲ್ಲಿ ಈಜಲು ತೆರಳಿದ ಇಬ್ಬರು ಸಾವು


ಮಂಗಳೂರು: ಈಜಲು ಹೋಗಿದ್ದ ಆರು  ಮಂದಿ ಯುವಕರ ಪೈಕಿ ಇಬ್ಬರು ಸಾವನ್ನಪ್ಪಿದ ಘಟನೆ ಆದಿತ್ಯವಾರ ಸಂಜೆ ಅಳಪೆ ಪಡ್ಪು ಬಳಿ ನಡೆದಿದೆ.


ನಗರದ  ಅಳಪೆ ಸ್ಥಳೀಯ ನಿವಾಸಿಗಳಾದ ವೀಕ್ಷಿತ್ (26) ಮತ್ತು  ವರುಣ್ (26) ಸಾವನ್ನಪ್ಪಿದವರು.

ಅಳಪೆಯ ಪಡ್ಪು ಬಳಿ ಇರುವ ನೀರು ತುಂಬಿರುವ ಕೆರೆಯಂತಿರುವ ಹೊಂಡದಲ್ಲಿ ವರುಣ್, ವೀಕ್ಷಿತ್ ಸೇರಿದಂತೆ 6 ಮಂದಿ ಯುವಕರು ಈಜಲು ತೆರಳಿದ್ದರು. ಇವರೆಲ್ಲ ನೀರಿಗಿಳಿದಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.