ಪಾಲಕ್ಕಾಡ್: ವಿವಾಹವಾದ ಕೆಲವೇ ದಿನಗಳಲ್ಲಿ ನವವಿವಾಹಿತೆ ರಸ್ತೆ ಅಪಘಾತಕ್ಕೆ ಬಲಿಯಾಗಿ ಆಕೆಯ ಪತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಪಲಕ್ಕಾಡ್‌ನ ಕುರುಡಿಕಾಡ್ ಎಂಬಲ್ಲಿ ನಡೆದಿದೆ.
ಪುಥುಕೋಡ್‌ನ ಕಣ್ಣನ್ನೂ ಮೂಲದ ಅನಿಶಾ(20) ಮೃತಪಟ್ಟ ದುರ್ದೈವಿ. ಕೊಯಮತ್ತೂರು ಮೂಲದ ಆಕೆಯ ಪತಿ ಶಾಕಿರ್ (32) ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವವರು.
ಅನಿಶಾ ಮತ್ತು ಶಾಕೀರ್ ಪಲಕ್ಕಾಡ್‌ನಿಂದ ಕೊಯಮತ್ತೂರಿಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಕಂಟೈನರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಅನಿಶಾ ಸ್ಥಳದಲ್ಲೇ ಮೃತಪಟ್ಟಿದ್ದು, ಬೈಕ್ ಸವಾರಿ ಮಾಡುತ್ತಿದ್ದ ಶಾಕೀರ್ ಗೆ ಗಂಭೀರ ಗಾಯವಾಗಿದೆ. ಅನಿಶಾ ಮತ್ತು ಶಾಕೀರ್ ಗೆ ಕಳೆದ ಜೂನ್ 4ರಂದು ಮದುವೆಯಾಗಿದ್ದರು.ವಿವಾಹವಾದ ಒಂದೇ ತಿಂಗಳಲ್ಲಿ ಅನಿಶಾ ದಾರುಣವಾಗಿ ಸಾವಿಗೀಡಾಗಿದ್ದಾಳೆ.