ಶಾಲಾ‌ ಕಾಲೇಜು ಬಳಿ ಸಿಗರೇಟು ಮಾರಾಟ ಪ್ರಕರಣ- ಮಂಗಳೂರಿನಲ್ಲಿ ಪೊಲೀಸರಿಂದ ದಿಢೀರ್ ದಾಳಿ


ಮಂಗಳೂರು: ಮಂಗಳೂರಿನಲ್ಲಿ ಶಾಲಾ ಕಾಲೇಜು ಬಳಿ ತಂಬಾಕು ಮತ್ತು ಸಿಗರೇಟು  ಮಾರಾಟ ಮಾಡುತ್ತಿರುವುದನ್ನು ಪರಿಶೀಲಿಸಲು ಮಂಗಳೂರು ನಗರ  ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ.

 ಶಾಲಾ ಕಾಲೇಜುಗಳ ಸಮೀಪ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ಬುಧವಾರ
 ದಿಢೀರ್ ತಪಾಸಣೆ ನಡೆಸಲಾಗಿದೆ.   
 
ಒಟ್ಟು 145 ಅಂಗಡಿಗಳನ್ನು ಪರಿಶೀಲಿಸಿದಾಗ 16 ಅಂಗಡಿಗಳಲ್ಲಿ ತಂಬಾಕು ಮತ್ತು ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಈ 16 ಅಂಗಡಿ ಮಾಲಕರ  ಮೇಲೆ  COTPA ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.