ಮಂಗಳೂರು- ತಿರುವಿನಲ್ಲಿ ಉರುಳಿದ ಲಾರಿ- CCTV ಯಲ್ಲಿ ದೃಶ್ಯ ಸೆರೆ

ಮಂಗಳೂರು: ಫೈವುಡ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಘಟನೆ ನಾಟೆಕಲ್-ಮಂಜನಾಡಿ ಮಾರ್ಗಮಧ್ಯೆ ಸಂಭವಿಸಿದೆ.

 ಅಪಘಾತದಲ್ಲಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಜುಲೈ 27ರ ಗುರುವಾರ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾಗುವ ದೃಶ್ಯ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.




ದೇರಳಕಟ್ಟೆಯಿಂದ ತೌಡುಗೋಳಿ ಕಡೆಗೆ ಲಾರಿ ತೆರಳುವ ವೇಳೆ ಈ ಘಟನೆ ನಡೆದಿದೆ. ರಸ್ತೆಯ ತಿರುವಿನಲ್ಲಿ ಸಿಮೆಂಟ್ ಮಿಕ್ಸರ್ ಟ್ಯಾಂಕ‌ ಎದುರಿನಿಂದ ಬಂದಿದೆ. ಲಾರಿ ಚಾಲಕ ಸಿಮೆಂಟ್ ಮಿಕ್ಸ‌ ಟ್ಯಾಂಕ‌ ಸಂಚರಿಸಲು ಅವಕಾಶ ಮಾಡಿಕೊಡಲು ಪ್ರಯತ್ನಿಸಿದಾಗ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕಂದಕಕ್ಕೆ ಉರುಳಿ ಬಿದ್ದಿದೆ.

ಲಾರಿ ಚಾಲಕ ಬ್ರೇಕ್‌ ಹಾಕಿದ ತಿರುವು ಸ್ವಲ್ಪ ತಗ್ಗು ಪ್ರದೇಶವಾಗಿದ್ದು ನಿಯಂತ್ರಣ ಕಳೆದುಕೊಂಡಿದೆ. ಲಾರಿಯ ಹಿಂದಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸವಾರ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕೃಷಿ ತೋಟಕ್ಕೆ ಲಾರಿ ಉರುಳಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.