-->
1000938341
ಡೈವೊರ್ಸ್ ಗೆ ಒಲ್ಲದ ಪತ್ನಿಯನ್ನು ಮುಗಿಸಲು ಪತಿಯಿಂದಲೇ ಸ್ಕೆಚ್: ಕೊಲೆಗೆತ್ನಿಸಿ ಅಪಘಾತ ಎಂದು ನಂಬಿಸಿದ ಏಳಿ ತಿಂಗಳ ಬಳಿಕ ಸಿಕ್ಕಿಬಿದ್ದ ಕೊಲೆಯ ರೂವಾರಿ‌

ಡೈವೊರ್ಸ್ ಗೆ ಒಲ್ಲದ ಪತ್ನಿಯನ್ನು ಮುಗಿಸಲು ಪತಿಯಿಂದಲೇ ಸ್ಕೆಚ್: ಕೊಲೆಗೆತ್ನಿಸಿ ಅಪಘಾತ ಎಂದು ನಂಬಿಸಿದ ಏಳಿ ತಿಂಗಳ ಬಳಿಕ ಸಿಕ್ಕಿಬಿದ್ದ ಕೊಲೆಯ ರೂವಾರಿ‌


ಬೆಂಗಳೂರು: ಪತ್ನಿಗೆ ಕಾರು ಅಪಘಾತಗೊಳಿಸಿ ಕೊಲೆಗೆ ಯತ್ನಿಸಿರುವ ಆರೋಪದ ಮೇಲೆ ಪತಿ ಹಾಗೂ ಆತನ ಸಹಚರನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ನಡೆದ ಏಳು ತಿಂಗಳ ಬಳಿಕ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ‌.

ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅರವಿಂದ್ (24) ಮತ್ತು ಚಾಲಕ ಉದಯ್ ಕುಮಾರ್ (40) ಆರೋಪಿಗಳು.

ಅರವಿಂದ್ ಕಳೆದ ವರ್ಷ ಚೈತನ್ಯ (22) ಎಂಬಾಕೆಯನ್ನು ವಿವಾಹವಾಗಿದ್ದನು. ಬಳಿಕ ಹೊಸಕೋಟೆಯಲ್ಲಿ ವಾಸಿಸುತ್ತಿದ್ದರು. ಚೈತನ್ಯ ತನ್ನ ಪತಿಯನ್ನು ಪೋಷಕರಿಂದ ಬೇರ್ಪಡಿಸಿ ಪ್ರತ್ಯೇಕವಾಗಿ ತಾವಿಬ್ಬರೇ ವಾಸಿಸುವಂತೆ ಒತ್ತಾಯಿಸುತ್ತಿದ್ದಳು. ಇದರಿಂದ ದಂಪತಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದ್ದರಿಂದ ಅರವಿಂದ್ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದ. ಆದರೆ ಅಷ್ಟರಲ್ಲಾಗಲೇ ಆಕೆ ಗರ್ಭಿಣಿಯಾಗಿದ್ದರಿಂದ ಅದನ್ನು ನಿರಾಕರಿಸಿ ಪೋಷಕರ ಮನೆಗೆ ಮರಳಿದ್ದಳು.


ಆರೋಪಿ ಅರವಿಂದನಿಗೆ ಕೆಲ ವರ್ಷಗಳಿಂದ ಲಾರಿ ಚಾಲಕ ಪರಿಚಯವಿತ್ತು. ಆದ್ದರಿಂದ ಉದಯ್‌ನನ್ನು ಸಂಪರ್ಕಿಸಿದ ಅರವಿಂದ ತನ್ನ ಪತ್ನಿ ಚೈತನ್ಯಾಳನ್ನು ಅಪಘಾತ ಮಾಡಿ ಕೊಲೆ ಮಾಡುವ ಸಂಚು ರೂಪಿಸಿದ್ದಾನೆ. ಈ ಕೆಲಸ ಮಾಡಲು ಉದಯ್‌ಗೆ 1.50 ಲಕ್ಷವನ್ನೂ ನೀಡಿದ್ದಾನೆ. ಅದರಂತೆ ಉದಯ್ 40 ಸಾವಿರ ಕೊಟ್ಟು ಹಳೇ ಟಾಟಾ ಸುಮೋ ಕಾರು ಖರೀದಿಸಿದ್ದಾನೆ. ಬಳಿಕ ಆರೋಪಿಗಳಿಬ್ಬರೂ ಚೈತನ್ಯಾ ಓಡಾಡುವ ಸ್ಥಳಗಳ ಬಗ್ಗೆ ಕೆಲ ದಿನಗಳ ಕಾಲ ನಿಗಾವಹಿಸಿದ್ದರು. ಚೈತನ್ಯಾ ಸಂಚಾರದ ಮಾರ್ಗದಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮರಾಗಳು ಇವೆ ಎಂಬುದನ್ನೂ ಗಮನಿಸಿದ್ದಾರೆ.

ಅದರಂತೆ ಜ.1ರಂದು ಚೈತನ್ಯಾ ಭರತನಾಟ್ಯ ತರಗತಿ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಮನೆಗೆ ಬರುತ್ತಿದ್ದಳು. ಈ ವೇಳೆ ಮಾರ್ಗ ಮಧ್ಯೆ ಬಾಗಲೂರಿನ ಕೆಐಡಿಬಿ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಬರುತ್ತಿದ್್ ವೇಳೆ ಆರೋಪಿಗಳು ಟಾಟಾ ಸುಮೋದಲ್ಲಿ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಚೈತನ್ಯಾರನ್ನು ಸ್ಥಳೀಯರು ಸಮೀಪ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಚೈತನ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಈ ಸಂಬಂಧ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿತ್ತು. ಆದರೆ, ಚೈತನ್ಯ ಪೋಷಕರು ಅಪಘಾತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಾಗಲೂರು ಠಾಣೆ ಪೊಲೀಸರು ಕೊಲೆಗೆ ಯತ್ನ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ಅಪಘಾತ ಮಾಡಿದ ಕಾರಿಗಾಗಿ ಹುಡುಕಾಟ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಅಪಘಾತ ನಡೆದ ಸ್ಥಳಕ್ಕೆ ಹೊಂದಿಕೊಂಡಂತ ವಿವಿಧ ರಸ್ತೆಗಳಲ್ಲಿ ಸಿಸಿಟಿವಿ ಪರಿಶೀಲಿಸಿದಾಗ ಕಾರು ಗುರುತು ಪತ್ತೆಯಾಗಿದ್ದು, ಕಾರು ಮಾಲೀಕನನ್ನು ಸಂಪರ್ಕಿಸಿದಾಗ ಅದನ್ನು ಕೆಲ ತಿಂಗಳ ಹಿಂದೆ ಅರವಿಂದ್ ಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ನಂತರ ಅರವಿಂದ್ ವಿಚಾರಣೆ ನಡೆಸಿದಾಗ ಅದು ಅಪಘಾತವಲ್ಲಾ ಕೊಲೆ ಮಾಡಲು ಮಾಡಿದ ಸ್ಕೆಚ್ ಎಂಬುದು ತಿಳಿದುಬಂದಿದೆ. ಕೇಸ್ ನ್ನು ಬಾಗಲೂರು ಠಾಣೆಗೆ ವರ್ಗಾಯಿಸಿದ್ದು, ಅರವಿಂದ್ ನೀಡಿದ ನನ್ನು ಬಂಧಿಸಲಾಗಿದೆ. ಆತ ಮಾಹಿತಿ ಆಧಾರದ ಮೇಲೆ ಉದಯ್ ಬಂಧಿಸಿದ್ದಾರೆ.

Ads on article

Advertise in articles 1

advertising articles 2

Advertise under the article