KCET Architechtural Exam: ಆಳ್ವಾಸ್ 8 ವಿದ್ಯಾರ್ಥಿಗಳ ಉತ್ತಮ ಸಾಧನೆ

KCET Architechtural Exam: ಆಳ್ವಾಸ್ 8 ವಿದ್ಯಾರ್ಥಿಗಳ ಉತ್ತಮ ಸಾಧನೆ





KCET Architechtural Exam 2023 ಫಲಿತಾಂಶ ಪ್ರಕಟಗೊಂಡಿದ್ದು, ಮೂಡಬಿದಿರೆಯ ಆಳ್ವಾಸ್ ಉತ್ತಮ ಸಾಧನೆ ಮಾಡಿದೆ.


ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಎಂಟು ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದು ಸಾಧನೆ ಮಾಡಿದ್ದಾರೆ.


ಆಳ್ವಾಸ್‌ನ ಸಾನ್ವಿ ಗುರುಮೂರ್ತಿ ಬೇವಿನಕಟ್ಟಿ 30ನೇ Rank ಗಳಿಸಿದರೆ, ಪೂರ್ವಿ ವಿ. ಧಾರೇಶ್ವರ್ 91ನೇ Rank, ನಂದಿತ ರವಿ ಕರೆನ್ನವರ್ 97ನೇ Rank, ಪ್ರಪುಲ್ ರಾಜ್ ಜಿ.ಆರ್ 205ನೇ Rank, ಯಶ್ವಂತ್ ಕೆ. 322ನೇ Rank, ಪ್ರಾರ್ಥನಾ ಎಸ್. ಗೌಡ 326ನೇ Rank, ರುಕ್ಮಿಣಿ ನಾಯರ್ 333ನೇ Rank, ಅಲ್ ಫೌಜಿಯಾ 452ನೇ Rankನೊಂದಿಗೆ ಪಾಸ್ ಆಗಿದ್ದಾರೆ.


ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.