5 ವರ್ಷದಿಂದ ವಿಟ್ಲ ದ ಬಾಲಕಿಗೆ ಲೈಂಗಿಕ ಕಿರುಕುಳ- ಕೇರಳದ ಯುವಕರ ಮೇಲೆ ಕೇಸ್


ವಿಟ್ಲ: ಬಾಲಕಿ ಮೇಲೆ, ಬೇರೆ ಬೇರೆ ಯುವಕರು ಬೇರೆ ಬೇರೆ ಸಂದರ್ಭದಲ್ಲಿ ಲೈಂಗಿಕ ಅಪರಾಧ ನಡೆಸಿದ್ದಾರೆ ಎಂದು ವಿಟ್ಲ  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

'ಪರಿಶಿಷ್ಟ ಪಂಗಡಕ್ಕೆ ಸೇರಿದ 16 ವರ್ಷದ ಬಾಲಕಿ ಮೇಲೆ ಕೇರಳ ಭಾಗದ ಕೆಲವು ಯುವಕರು ನಿರಂತರ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ' ಎಂದು ದೂರಿನಲ್ಲಿ ತಿಳಿಸಲಾಗಿದೆ.

'ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಅಪರಾಧ ನಡೆಸಿದ್ದರು.ಬಾಲಕಿ ಮನೆಗೆ ಈಚೆಗೆ ಒಂದು ದಿನ ಬರುವಾಗ
ತಡವಾದ ಬಗ್ಗೆ ವಿಚಾರಿಸಿದಾಗ ಆಕೆ ಈ ಬಗ್ಗೆ ಮಾಹಿತಿ ನೀಡಿದ್ದಳು. ಐವರು ಆರೋಪಿಗಳು ಲೈಂಗಿಕ ಅಪರಾಧ ನಡೆಸಿದ್ದಾರೆ. 2019ರಿಂದಲೂ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಆರೋಪಿಗಳಲ್ಲಿ ಒಬ್ಬಾತ ಬಾಲಕಿಯ ಬಂಧು. ಉಳಿದವರು ಕೇರಳದವರು ಎಂದು ಪೋಷಕರು ತಿಳಿಸಿದ್ದಾರೆ.


 ದೂರಿನಲ್ಲಿ ಆರೋಪಿಗಳ ವಿರುದ್ಧ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ (ಪೊಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕ್ರಮಕೈಗೊಂಡಿದ್ದಾರೆ.