ಮಹಿಳೆಯರಿಗೆ ರೂ 2 ಸಾವಿರ ಸಿಗುವ ಗೃಹಲಕ್ಷ್ಮೀ ಯೋಜನೆಗೆ ನಿಮ್ಮ ಹೆಸರು ನೊಂದಾಯಿಸಲು ಹೀಗೆ ಮಾಡಿ
Tuesday, July 18, 2023
ಬೆಂಗಳೂರು: ಸ್ತ್ರೀ ಸ್ವಾವಲಂಬನೆಯತ್ತ ದಿಟ್ಟ ಹೆಜ್ಜೆ ಇಟ್ಟಿರುವ ಗೃಹಲಕ್ಷ್ಮೀ ಯೋಜನೆಗೆ ಇದೇ ಜುಲೈ 19 ರಂದು ಚಾಲನೆ ಸಿಗಲಿದೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳು ಯಾವುದೇ ಮಧ್ಯವರ್ತಿಗಳ ಆಮಿಷಕ್ಕೆ ಒಳಗಾಗದೇ ಉಚಿತವಾಗಿ ನೋಂದಣಿ ಮಾಡಿಕೊಳ್ಳಿರಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ‌್ಕರ್ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವಿಟ್ ಮೂಲಕ ಮನವಿ ಮಾಡಿರುವ ಅವರು, "ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು ಅಥವಾ ಸ್ವಯಂಸೇವಕ ' ಪ್ರಜಾಪ್ರತಿನಿಧಿಗಳು 'ಮನೆ ಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ' ಎಂದು ಅವರು ತಿಳಿಸಿದ್ದಾರೆ.
"ನೋಂದಣಿಗೆ ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಡಿತರ ಕಾರ್ಡ್ ಸಂಖ್ಯೆ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ. ಇನ್ನು ಪತಿಯ ಆಧಾರ್ ಕಾರ್ಡ್ ಕೂಡ ಕಡ್ಡಾಯ ಬೇಕಾಗುತ್ತೆ. ಆಧಾರ್ ಜತೆಗೆ ಮೊಬೈಲ್ ಕೊಂಡೊಯ್ದರೆ ಸಾಕು, ಬೇರೇನೂ ಬೇಡ' ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ.
ಸಹಾಯವಾಣಿ ಸಂಖ್ಯೆಗೆ SMS ಮಾಡಿ
ಯೋಜನೆಯ ಉಚಿತ ಲಾಭ ಪಡೆದುಕೊಳ್ಳಲು ಸಹಾಯವಾಣಿ 8147500500 ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು SMS ಮಾಡಿ. ಕೂಡಲೇ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಹೋಗುತ್ತೆ. ಇನ್ನೂ ಗೊಂದಲವಿದ್ದರೆ ಇಲಾಖೆ 1902 ನಂಬರ್ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಬೇಕಾಗಿರುವ ಧಾಖಲೆಗಳು :
-ಮನೆ ಯಜಮಾನಿಯ ಪಡಿತರ ಚೀಟಿ (ರೇಷನ್ ಕಾರ್ಡ್ )
-ಆಧಾರ್ ಲಿಂಕ್ ಆಗಿರುವ ಮೊಬೈಲ್
-ಬ್ಯಾಂಕ್ ಅಕೌಂಟ್ ಆಧಾರ್ ಲಿಂಕ್ ಆಗದೆ ಇದ್ದಲ್ಲಿ ಮನೆಯಜಮಾನಿಯ ಇನ್ನೊಂದು ಬ್ಯಾಂಕ್ ಅಕೌಂಟ್ ನ ಪಾಸ್ ಬುಕ್ (PASS book )
*ಅರ್ಜಿ ಸಲ್ಲಿಸುವ ವಿಧಾನ* :
1. ಅರ್ಜಿದಾರರ (ಮನೆ ಯಜಮಾನಿ ) ರೇಷನ್ ಸಂಖ್ಯೆ , ಹೆಸರು , ವರ್ಗ ಹಾಗೂ ಮೊಬೈಲ್ ಸಂಖ್ಯೆ ನಮೂದಿಸುವುದು.
2 ಆಧಾರ್ ಗೆ ಲಿಂಕ್ ಆಗಿರುವ bank ಅಕೌಂಟ್ ಇದ್ದಲ್ಲಿ ಹೌದು ಎಂದು, ಇಲ್ಲದೆ ಇದ್ದಲ್ಲಿ ಅರ್ಜಿದಾರರ ಬೇರೆ bank ಅಕೌಂಟ್ details ನ ಭರ್ತಿ ಮಾಡಬೇಕು.
3 ಸ್ವಯಂ ಘೋಷಣೆ - ತೆರಿಗೆ ಪಾವತಿಯ ಬಗ್ಗೆ.
4. ಆಧಾರ್ ಧ್ರಡೀಕರಣ .
ಸೂಚನೆ :- ಆಧಾರ್ ಗೆ ಲಿಂಕ್ ಆಗಿರುವ bank ಅಕೌಂಟ್ ಇಲ್ಲದೆ ಇದ್ದಲ್ಲಿ ಅರ್ಜಿದಾರರ ಇನ್ನೊಂದು bank ಅಕೌಂಟ್ ನ ಪಾಸ್ ಬುಕ್ ನ ಮೊದಲನೆಯ ಪುಟವನ್ನು UPLOAD ಮಾಡಬೇಕು