ಮಂಗಳೂರಿನ ಪಬ್ಬಾಸ್ ಐಡಿಯಲ್ ನ ಗಡ್ ಬಡ್ ಗೆ ವಿಶ್ವದ ಟಾಪ್ 100 ರಲ್ಲಿ ಗೌರವ

ಮಂಗಳೂರು: ಮಂಗಳೂರಿನವರು  ಐಡಿಯಲ್ ಮತ್ತು ಪಬ್ಬಾಸ್ ನ ಐಸ್ ಕ್ರೀಂ ನ ರುಚಿಯನ್ನು ಆಸ್ವಾದಿಸಿಯೆ ಇರುತ್ತಾರೆ.  ರುಚಿಗೆ ದೇಶದೆಲ್ಲೆಡೆ ಪರಿಚಿತವಾಗಿರುವ ಐಡಿಯಲ್ ಮತ್ತು ಪಬ್ಬಾಸ್ ನ ಗಡ್ ಬಡ್ ಐಸ್ ಕ್ರೀಂ ಗೆ ವಿಶ್ವದ 100 ರಲ್ಲೊಂದು ಸ್ಥಾನ ದೊರಕಿದೆ.


 
 
 "ವಿಶ್ವದ 100 ಅತ್ಯಂತ ಸಾಂಪ್ರದಾಯಿಕ ಐಸ್ ಕ್ರೀಮ್‌ಗಳ"  ಪಟ್ಟಿಯಲ್ಲಿ   ಭಾರತದ 5 ಐಸ್ ಕ್ರೀಮ್ ಫ್ಲೇವರ್ ಗಳು ಸ್ಥಾನ ಪಡೆದಿದೆ. ಅವುಗಳಲ್ಲಿ ಬೆಂಗಳೂರಿನ ಕಾರ್ನರ್‌ ಹೌಸ್‌ನಲ್ಲಿ ತಯಾರಿಸಲಾಗುವ ಜನಪ್ರಿಯ ಡೆತ್‌ ಬೈ ಚಾಕಲೇಟ್‌, ಮುಂಬಯಿಯ ಕೆ. ರುಸ್ತೋಮ್‌ ಆ್ಯಂಡ್‌ ಕೋನಲ್ಲಿ ಸಿಗುವ ಮ್ಯಾಂಗೋ ಐಸ್‌ಕ್ರೀಮ್‌ ಸ್ಯಾಂಡ್‌ವಿಚ್‌, ಮುಂಬಯಿಯ ಅಪ್ಸರಾ ಐಸ್‌ಕ್ರೀಮ್‌ನವರು ತಯಾರಿಸುವ ಗ್ವಾವಾ ಐಸ್‌ಕ್ರೀಮ್‌ (ಪೇರಳೆ ಐಸ್‌ ಕ್ರೀಮ್‌), ಮುಂಬಯಿಯ ನ್ಯಾಚುರಲ್ಸ್‌ ಸಂಸ್ಥೆಯ ಟೆಂಡರ್‌ ಕೋಕನಟ್‌ ಐಸ್‌ಕ್ರೀಮ್‌ ಹಾಗೂ ಮಂಗಳೂರಿನ ಪಬ್ಬಾಸ್‌ನಲ್ಲಿ ಸಿಗುವ ಗಡ್‌ಬಡ್‌ ಐಸ್‌ಕ್ರೀಮ್ ಆಗಿದೆ.

 

ಐಡಿಯಲ್ ಪಬ್ಬಾಸ್ ನಲ್ಲಿ ಗಡ್ ಬಡ್ ಫೇಮಸ್

ಮಂಗಳೂರಿನ ಐಡಿಯಲ್ ಮತ್ತು ಪಬ್ಬಾಸ್ ನಲ್ಲಿ ತಯಾರಾಗುವ  ಐಸ್‌ಕ್ರೀಂ ಗಡ್‌ಬುಡ್  ಹಣ್ಣುಗಳು, ಬೀಜಗಳು ಮತ್ತು ಸಿರಪ್‌ಗಳ ಮಿಶ್ರಣದಿಂದ ಹೆಸರುವಾಸಿಯಾಗಿದೆ. ಮಂಗಳೂರಿನ ಐಡಿಯಲ್ ಸಂಸ್ಥೆ ಯಲ್ಲಿ ಇದೀಗ 100 ಕ್ಕೂ ಅಧಿಕ ಐಟಂ ಗಳು ಲಭ್ಯವಿದ್ದುಒಂದಕ್ಕೊಂದು ಮೀರಿಸುವ ಭಿನ್ನ ರುಚಿಗಳನ್ನು ಹೊಂದಿದೆ.

 


1975 ರಲ್ಲಿ ಗಡ್ ಬಡ್ ಆರಂಭ
ದಿವಂಗತ ಪ್ರಭಾಕರ ಕಾಮತ್ ಅವರು ಮಂಗಳೂರಿನ ಐಡಿಯಲ್ ಸಂಸ್ಥೆಯನ್ನು  1975 ರಲ್ಲಿ ಆರಂಭಿಸಿದ್ದರು. ಆರಂಭದ ಕೆಲ ತಿಂಗಳಲ್ಲಿ   ಗಡ್ ಬಡ್ ಐಸ್ ಕ್ರೀಂ ತಯಾರಿಸಲಾಯಿತು.  

ಗಡ್ ಬಡ್ ಐಸ್ ಕ್ರೀಂ ನಲ್ಲಿ ಏನಿದೆ?

ಕೇಸರಿ, 
ರಸಬಾರಿ ಜೆಲ್ಲಿ, 
ವಿವಿಧ ಬಗೆಯ ಬೀಜಗಳು, 
ಸ್ಟ್ರಾಬೆರಿ ಐಸ್ ಕ್ರೀಂ, 
ವಿವಿಧ ಬಗೆಯ ಹಣ್ಣಿನ ತುಂಡುಗಳು 
ವೆನಿಲ್ಲಾ ಐಸ್ ಕ್ರೀಂ 




1975 ರಲ್ಲಿ ಐಡಿಯಲ್ ಸಂಸ್ಥೆ ಯನ್ನು ಆರಂಭವಾದರೆ, ಇದೇ ಸಂಸ್ಥೆಯ ಪಬ್ಬಾಸ್ ಐಸ್ ಕ್ರೀಂ ಸಂಸ್ಥೆ ಯನ್ನು‌ 1996 ಕ್ಕೆ ಆರಂಭಿಸಲಾಯಿತು.  ಎರಡು ಕಡೆಯು ಒಂದೇ ರೀತಿಯ ರುಚಿಯ ಐಸ್ ಕ್ರೀಂ ನೀಡಲಾಗುತ್ತಿದೆ.