ಪೌರಕಾರ್ಮಿಕರಿಗೆ ಸಿಕ್ಕಿತ್ತು ಕೇರಳದ 10 ಕೋಟಿ ರೂ ಲಾಟರಿ- ಟಿಕೆಟ್ ಖರೀದಿಸಲು ಇವರು ಮಾಡಿದ್ದೇನು ಗೊತ್ತ? ( VIDEO NEWS)







ತಿರುವನಂತಪುರ: ಕೇರಳದ ಮಲಪ್ಪುರ ಜಿಲ್ಲೆಯ 11 ಮಂದಿ ಮಹಿಳಾ ಪೌರಕಾರ್ಮಿಕರಿಗೆ  ಕೇರಳ ಸರ್ಕಾರದ ಮುಂಗಾರು ಬಂಪರ್ ಲಾಟರಿಯ 10 ಕೋಟಿ ಬಹುಮಾನ ಒಲಿದಿದೆ.


 ಪರಪ್ಪನಂಗಡಿಯಲ್ಲಿ ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಮಹಿಳೆಯರ ತಂಡ ಈ ಬಂಪರ್ ಲಾಟರಿ ಬಹುಮಾನ ಪಡೆದುಕೊಂಡಿದೆ.

ಲಾಟರಿ ಖರೀದಿ ಮಾಡಿದ್ದು ಹೀಗೆ


ಈ 10 ಮಂದಿ ಪೌರ ಕಾರ್ಮಿಕರು ಎಲ್ಲರೂ  ಒಟ್ಟುಗೂಡಿ ‍250ರ ಲಾಟರಿ ಟಿಕೆಟ್ ಖರೀದಿಸಿದ್ದರು. ಪ್ರತಿಯೊಬ್ಬರು 25 ರೂ ಹಾಕಿ ಈ ಲಾಟರಿ ಖರೀದಿಸಿದ್ದರು.  ಈ ಟಿಕೆಟ್‌ಗೆ ಅದೃಷ್ಟದ ಬಹುಮಾನ ಲಭಿಸಿದೆ.





ಈ ಹಿಂದೆಯೂ ನಾವು ಎಲ್ಲರೂ ಹಣ ಹಾಕಿ ಲಾಟರಿ ಟಿಕೆಟ್ ಖರೀದಿಸಿದ್ದೆವು. 1000 ಬಹುಮಾನ ಲಭಿಸಿತ್ತು ಎಂದು ಪೌರಕಾರ್ಮಿಕ ಮಹಿಳೆಯರು ತಿಳಿಸಿದ್ದಾರೆ. 


ಬಹುಮಾನದ ಮೊತ್ತದಲ್ಲಿ ಶೇ 35ರಷ್ಟು ಹಣ ಲಾಟರಿ ಏಜೆಂಟ್ ಕಮಿಷನ್‌ಗೆ ಮತ್ತು ತೆರಿಗೆಗೆ ಕಡಿತಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.